Monday, July 7, 2025
spot_imgspot_img
spot_imgspot_img

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವಿಟ್ಲ ಇದರ ನೂಪುರ ಅಮೈ ಜ್ಞಾನವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವಿಟ್ಲ ಇದರ ನೂಪುರ ಅಮೈ ಜ್ಞಾನವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮ ಅಮೈ ಭಜನಾ ಮಂದಿರದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ನಡೆಯಿತು.

ಕೇಪು ಗ್ರಾಮದಲ್ಲಿ ಕಾರ್ಯಚರಿಸುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ವಿಟ್ಲ ಇದರ ಐದು ಸ್ವಸಹಾಯ ಸಂಘಗಳು ಒಟ್ಟು ಸೇರಿಕೊಂಡು ನೂಪುರ ಅಮೈ ಜ್ಞಾನವಿಕಾಸ ವಾರ್ಷಿಕೋತ್ಸವ ಕಾರ್ಯಕ್ರಮ ಅಮೈ ಭಜನಾ ಮಂದಿರದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯ ಶಿಕ್ಷಕ ರಮೇಶ್ ಎಂ ಬಾಯಾರು ನೆರವೇರಿಸಿದರು. ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ವಹಿಸಿದ್ದರು. ವೇದಿಕೆಯಲ್ಲಿ ವಿಟ್ಲ ವಲಯ ಮಾಜಿ ಅಧ್ಯಕ್ಷ ವಿಠಲ, ಜ್ಞಾನವಿಕಾಸ ಕೇಂದ್ರದ ಅಧ್ಯೆಕ್ಷೆ ಲಲಿತಾ ಉಪಸ್ಥಿತರಿದ್ದರು.

ನೂಪುರ ಜ್ಞಾನವಿಕಾಸ ಕೇಂದ್ರದ ವರದಿಯನ್ನು ಜ್ಞಾನವಿಕಾಸದ ಸಂಯೋಜಕಿ, ಕೇಪು ಸೇವಾ ಪ್ರತಿನಿಧಿ ಭವಾನಿ ಮಂಡಿಸಿದರು. ಸುಜಾತ, ಪುಷ್ಪಾವತಿ, ದೇವಕಿ, ಮಾಲತಿ, ಸುಂದರಿ ಇವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ಕೇಂದ್ರದ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಈ ಕಾರ್ಯಕ್ರಮದ ನಿರೂಪಣೆಯನ್ನು ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸವಿತಾ ನೆರವೇರಿಸಿದರು. ಸ್ವಾಗತವನ್ನು ಪುಷ್ಪಲತಾ, ಧನ್ಯವಾದವನ್ನು ವಲಯ ಮೇಲ್ವಿಚಾರಕ ವಿಜಯ ಕುಮಾರ್ ನೆರವೇರಿಸಿದರು.

driving
- Advertisement -

Related news

error: Content is protected !!