Friday, May 10, 2024
spot_imgspot_img
spot_imgspot_img

ವಿಟ್ಲ: ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ 61ನೇ “ಶೌರ್ಯ” ಸಮಿತಿಯ ಉದ್ಘಾಟನೆ ಮತ್ತು ತರಬೇತಿ ಕಾರ್ಯಕ್ರಮ

- Advertisement -G L Acharya panikkar
- Advertisement -

ವಿಟ್ಲ : ಆಕಸ್ಮಿಕವಾಗಿ ವಿಪತ್ತುಗಳನ್ನು ಎದುರಿಸಲು ಕಂದಾಯ ಇಲಾಖೆಯೊಂದಿಗೆ ಗ್ರಾಮ ವ್ಯಾಪ್ತಿಯ ವಿಪತ್ತು ನಿರ್ವಹಣಾ ತಂಡಗಳು ಕೈಜೋಡಿಸಿ ದಾಗ ವಿಪತ್ತು ನಿರ್ವಹಣೆ ಯಶಸ್ವಿ ಆಗುತ್ತೆ ಎಂದು ವಿಟ್ಲ ನಾಡ ಕಚೇರಿಯ ಉಪತಾಶಿಲ್ದಾರದ ವಿಜಯ ವಿಕ್ರಮ್ ಹೇಳಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ಯೋಜನೆ ಬಿಸಿ ಟ್ರಸ್ಟ್( ರಿ)ವಿಟ್ಲ,ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ, ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಪುತ್ತೂರು ಇದರ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ 61ನೇ “ಶೌರ್ಯ” ಸಮಿತಿಯ ಉದ್ಘಾಟನೆ ಮತ್ತು ತರಬೇತಿ ಕಾರ್ಯಕ್ರಮವನ್ನು ವಿಠಲ ಪದವಿಪೂರ್ವ ಕಾಲೇಜಿನಲ್ಲಿ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆಯ ವಿಟ್ಲ ವಲಯ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್ ವಹಿಸಿದ್ದರು.


ವಿಟ್ಲ ಆರಕ್ಷಠಾಣೆಯ ಉಪ ನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿ, ಧರ್ಮಸ್ಥಳ ಯೋಜನೆಯ ಗ್ರಾಮ ವ್ಯಾಪ್ತಿಯಲ್ಲಿ ವಿಪತ್ತು ನಿರ್ವಹಣಾ ತಂಡ ರಚಿಸಿದ್ದು ಶ್ಲಾಘನೀಯವಾದದ್ದು. ಯಾಕೆಂದರೆ ಕೇಂದ್ರ ಸ್ಥಾನದಲ್ಲಿರುವ ವಿಪತ್ತು ನಿರ್ವಹಣಾ ತಂಡಗಳು ವಿಪತ್ತು ನಡೆದ ಸ್ಥಳಕ್ಕೆ ಭೇಟಿ ನೀಡಲು ಬಹಳ ಸಮಯ ತಗಳುವುದರಿಂದ ಆ ಸಮಯದಲ್ಲಿ ಕೂಡಲೇ ಸ್ಪಂದಿಸುವಂತಹ ಸ್ಥಳೀಯ ತಂಡಗಳು ಅಗತ್ಯ ಬಹಳಷ್ಟು ಇದೆ ಎಂದು ಅಭಿಪ್ರಾಯಪಟ್ಟರು.


ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ವಿಪತ್ತು ನಿರ್ವಹಣಾ ತಂಡದ ಉದ್ದೇಶ ಮತ್ತು ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ವಿಟ್ಲ ರೋಟರಿ ಕ್ಲಬ್ಬಿನ ಅಧ್ಯಕ್ಷ ಪ್ರಕಾಶ್ ನಾಯಕ್, ಪುತ್ತೂರು ಅಗ್ನಿಶಾಮಕ ಠಾಣೆಯ ಠಾಣಾ ಅಧಿಕಾರಿ ಶಂಕರ್, ಠಾಣಾ ಮುಖ್ಯಸ್ಥ ಲೀಲಾದರ್, ಜನಜಾಗ್ರತಿ ವೇದಿಕೆ ವಿಟ್ಲ ಇದರ ಸದಸ್ಯ ನಟೇಶ್ ವಿಟ್ಲ, ಜನಜಾಗ್ರತಿಕೆ ವೇದಿಕೆಯ ಕರಾವಳಿ ಪ್ರಾದೇಶಿಕ ಕಚೇರಿ ಉಡುಪಿ ಇದರ ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ, ಮೊದಲಾದವರು ಉಪಸ್ಥಿತರಿದ್ದರು. ಮೇಲ್ವಿಚಾರಕರಾದ ಜಯಶ್ರೀ ಹಾಗೂ ಜ್ಞಾನವಿಕಾಸ ಸಮನ್ವ್ಯಾಧಿಕಾರಿ ಸವಿತಾ ಪ್ರಾರ್ಥಿಸಿ, ವಿಪತ್ತು ವಿಭಾಗ ಬೆಳ್ತಂಗಡಿ ಇದರ ಯೋಜನೆ ಅಧಿಕಾರಿ ಜೈವಂತ ಪಟಗಾರ ಪ್ರಾಸ್ತವಿಕ ಮಾತನಾಡಿ, ವಿಟ್ಲ ತಾಲೂಕು ಯೋಜನಾ ಅಧಿಕಾರಿ ಚಿನ್ನಪ್ಪ ಗೌಡ ಸ್ವಾಗತಿಸಿ, ವಿಟ್ಲ ವಲಯ ಮೇಲ್ವಿಚಾರಕಿ ಸರಿತಾ ವಂದಿಸಿದರು. ಮಾಣಿ ವಲಯ ಮೇಲ್ವಿಚಾರಕಿ ವಿನೋದ ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕರುಗಳಾದ ಸುಗುಣಶೆಟ್ಟಿ, ಮಾಲತಿ, ಸರಿತಾ, ಮೋಹಿ,ನಿಜಗದೀಶ್, ಸಹಕರಿಸಿದರು.

- Advertisement -

Related news

error: Content is protected !!