- Advertisement -
- Advertisement -


ವಿಟ್ಲ: ಸಮುದಾಯ ಆರೋಗ್ಯ ಕೆಂದ್ರ ವಿಟ್ಲ ಇಲ್ಲಿನ ವೈದ್ಯಾಧಿಕಾರಿ ಡಾ| ವೇದಾವತಿ ಜೆ.ಬಲ್ಲಾಳ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಮತಿ ಕುಸುಮ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶ್ರೀಮತಿ ಗೀತಾವತಿ ಆಶಾ ಕಾರ್ಯಕರ್ತೆಯರ ಜೊತೆಗೆ ಅ.11ರಂದು ಕೋವಿಡ್ ವ್ಯಾಕ್ಸಿನ್ ನಿರಾಕರಣೆ ಮಾಡುತ್ತಿರುವ ಮನೆಗಳಿಗೆ ತೆರಳಿ ಮನ ಒಲಿಸಿದರು.

ಪಂಚಾಯತ್ ಸದಸ್ಯೆ ಶ್ರೀಮತಿ ಅವ್ವಮ್ಮ ಇವರನ್ನು ಭೇಟಿಯಾಗಿ ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳುವಲ್ಲಿ ಜನರನ್ನು ಮನ ಒಲಿಸಬೇಕೆಂದು ತಿಳಿಸಿದರು. ವೈದ್ಯಾಧಿಕಾರಿಯವರು ಖಾಯಿಲೆಯಿಂದ ಬಳಲುತ್ತಿರುವವರ ದಾಖಲೆಗಳನ್ನು ಪರಿಶೀಲಿಸಿ ಜನರಿಗಿದ್ದ ಭಯವನ್ನು ಹೋಗಲಾಡಿಸಿದರು.

- Advertisement -








