Thursday, May 16, 2024
spot_imgspot_img
spot_imgspot_img

ವಿಟ್ಲ: ಸ್ಯಾಕ್ಸೋಫೋನ್ ವಾದಕ ಡಾ.ಪಿ.ಕೆ. ದಾಮೋದರ ರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ

- Advertisement -G L Acharya panikkar
- Advertisement -

ವಿಟ್ಲ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2022-23 ನೇ ಸಾಲಿನ ಕರ್ನಾಟಕ ಕಲಾಶ್ರೀ ಗೌರವ ಹಾಗೂ ವಾರ್ಷಿಕ ಪ್ರಶಸ್ತಿ ನೀಡಲಾಗಿದ್ದು, ಸ್ಯಾಕ್ಸೋಪೋನ್ ವಾದಕ ಡಾ.ಪಿ.ಕೆ. ದಾಮೋದರ ಹಾಗೂ 18 ಜನ ಕಲಾವಿದರು ಇತರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೀತ ಹಾಗೂ ನೃತ್ಯಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗೆ ಮತ್ತು ವಿಟ್ಲ ಸಮೀಪದ ಪಡಿಬಾಗಿಲು ನಿವಾಸಿಯಾದ ಸ್ಯಾಕ್ಸೋಫೋನ್ ವಾದಕ ಡಾ.ಪಿ.ಕೆ. ದಾಮೋದರ ರಿಗೆ ಕರ್ನಾಟಕ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಾನ ಕಲಾಭೂಷಣ ವಿದುಷಿ ವಸಂತ ಮಾಧವಿ , ಉಷಾದಾತಾರ್ , ಡಾ ಎಸ್ ಮಂಜುಳಾ , ಶ್ರೀ ಪ್ರಕಾಶ್ , ರಾಜಗೋಪಾಲ್ ಶ್ರೀರಂಗಪಟ್ಟಣ , ಅಕಾಡೆಮಿ ಅಧ್ಯಕ್ಷರಾದ ಅನೂರು ಅನಂತ ಕೃಷ್ಣ ಶರ್ಮ ಸೇರಿದಂತೆ ಮತ್ತಿತ್ತರು ಉಪಸ್ಥಿತರಿದ್ದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸ್ಯಾಕ್ಸೋಪೋನ್ ವಾದಕರಾದ ಶ್ರೀ ಕೃಷ್ಣ ಪುರುಷ – ಸುನಂದಾ ದಂಪತಿ ಪುತ್ರ ಪಿ.ಕೆ. ದಾಮೋದರ ಮೂಲತಃ ಪುತ್ತೂರಿನ ನೆಲ್ಲಿಕಟ್ಟೆಯವರು ಪ್ರಸ್ತುತ ವಿಟ್ಲ ಸಮೀಪದ ಅಳಿಕೆ ಪಡೀಬಾಗಿಲು ಎಂಬಲ್ಲಿ ನೆಲೆಸಿದ್ದಾರೆ. ಖ್ಯಾತ ಸ್ಯಾಕ್ಸೋಪೋನ್ ವಾದಕ ಪಿ. ಕೆ. ಗಣೇಶ್ ಸಹೋದರ 4ನೇ ತರಗತಿ ಓದಿ ಸ್ಯಾಕ್ಸೋಪೋನ್ನ್ನತ್ತ ಒಲವು ತೋರಿದ್ದ ದಾಮೋದರ 10ನೇ ವಯಸ್ಸಿನಲ್ಲೇ ಸ್ಯಾಕ್ಸೋಪೋನ್ ವಾದಕರಾದರು. ತಂದೆಯೇ ಮೊದಲ ಗುರು.

ತಂಜವೂರಿನಲ್ಲಿ ಸಂಗೀತ ವಿದ್ವಾನ್ ಶ್ರೀ ಟಿ. ಜೆ. ರಾಮದಾಸ್, ಕುಂಭಕೋಣದ ಬಾಲಕೃಷ್ಣ, ಸಂಗೀತ ವಿದ್ವನ್ ವಿಷ್ಣುಹೊಳ್ಳ ಅವರಿಂದ ಸ್ಯಾಕ್ಸೋಪೋನ್ ಕಲಿತು ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಬಹರೈನ್, ಸಿಂಗಾಪುರ್, ಮಲೇಷಿಯಾ, ಶ್ರೀಲಂಕಾ ಮತ್ತಿತರ ಕಡೆ ಪ್ರದರ್ಶನ ನೀಡಿದ್ದಾರೆ. ಹಾಗೂ ತನ್ನ ಸಹೋದರರ ಜೊತೆ ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಜಾತ್ರೋತ್ಸವ ವೇಳೆ ಸ್ಯಾಕ್ಸೋಪೋನ್ ಸೇವೆ ಮಾಡುತಿದ್ದ ದಾಮೋದರ ಸಭಾ, ದೇವಾಲಯದ ಇನ್ನಿತರ ಹಬ್ಬ ಮತ್ತು ಮದುವೆ ಸಮಾರಂಭಗಳಿಗೆ ಕಾರ್ಯಕ್ರಮಗಳನ್ನು ಕೊಡುತ್ತಿದ್ದಾರೆ. ದಾಮೋದರ ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಂಚಿಕಮಾಂಕೋಟಿ ಪೀಠದ ಆಸ್ಥಾನ ವಿದ್ವಾನ್ ಗೌರವ, ನಾದವಿಶಾರದ, ಕಲಾರತ್ನ, ಗೌರವ ಡಾಕ್ಟರೇಟ್, ಸ್ಯಾಕ್ಸೋಪೋನ್ ಎವರೆಸ್ಟ್, ನಾದ ಸುಧಾಮಣಿ, ನಾದಕೇಸರಿ, ಕಲೇಜ್ಞಾನಸಿಗಿರಂ, ಮಂಚಕಲಾರತ್ನ ಹಾಗೂ ಮೊದಲಾದ ಹಲವು ಪ್ರಶಸ್ತಿ ಬಂದಿವೆ.

- Advertisement -

Related news

error: Content is protected !!