Friday, May 3, 2024
spot_imgspot_img
spot_imgspot_img

ವಿಟ್ಲ: ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ; ಇಬ್ಬರ ಬಂಧನ

- Advertisement -G L Acharya panikkar
- Advertisement -

ವಿಟ್ಲ: ಕಾರಿನಲ್ಲಿ ಹಿಂಸಾತ್ಮಕ ರೀತಿಯಲ್ಲಿ ದನ ಸಾಗಾಟ ಮಾಡುತ್ತಿದ್ದ ಘಟನೆ ನಡೆದಿದೆ. ಈ ಬಗ್ಗೆ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕೊಲ್ಲಪದವು ಎಂಬಲ್ಲಿ ಘಟನೆ ನಡೆದಿದೆ.

ಬಂಧಿತ ಆರೋಪಗಳನ್ನು ನಾರಾಯಣ ನಾಯ್ಕ, ಸಂತೋಷ ಕುಮಾರ್‌ ಎನ್ನಲಾಗಿದೆ.

ಘಟನಾ ವಿವರ:

31-08-2022 ರಂದು ವಿಟ್ಲ ಠಾಣಾ ಹೆಚ್‌ಸಿ 496 ಪ್ರಸನ್ನ ಕುಮಾರ್‌ ಮತ್ತು ಇಲಾಖಾ ಜೀಪು ಚಾಲಕ ಎಹೆಚ್‌ಸಿ 1475ನೇ ಸಂತೋಷ ಕುಮಾರ್‌ರವರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ-19-ಜಿ-0840ನೇಯದರಲ್ಲಿ ವಿಟ್ಲ ಪೇಟೆ, ಚಂದಳಿಕೆ, ಮಂಗಳಪದವು ಸಾಲೆತ್ತೂರು, ಉಕ್ಕುಡ ಖುದ್ದುಪದವು ಕಡೆಗಳಲ್ಲಿ ರಾತ್ರಿ ರೌಂಡ್ಸ್‌ ಕರ್ತವ್ಯವನ್ನು ನಿರ್ವಹಿಸುತ್ತಾ ಈ ದಿನ ದಿನಾಂಕ 01-09-2022 ರಂದು ಬಂಟ್ವಾಳ ತಾಲೂಕು ಪುಣಚ ಗ್ರಾಮದ ಕೊಲ್ಲಪದವು ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿಗೆ ತಲುಪಿ ವಾಹನ ತಪಾಸಣೆ ಮಾಡುತ್ತಿದ್ದಾಗ ಸಮಯ ಬೆಳಗಿನ ಜಾವ 05-15 ಗಂಟೆಗೆ ಶರವು ಕಡೆಯಿಂದ ಸಾರಡ್ಕ ಕಡೆಗೆ ಕೆಎಲ್‌-14-ಎನ್‌-3805ನೇ ಓಮ್ನಿ ಕಾರಿನಲ್ಲಿ ನಾರಾಯಣ ನಾಯ್ಕ ಮತ್ತು ಸಂತೋಷ ಕುಮಾರ್‌ ರವರು ಬಲ್ನಾಡು ಗ್ರಾಮದ ಕುಮಾರ್‌ ಹೊಳ್ಳ ಎಂಬವರಿಂದ ನಸು ಕೆಂಪು ಬಣ್ಣದ ದನದ ಗಂಡು ಕರುವನ್ನು ಖರೀದಿ ಮಾಡಿ ಅದನ್ನು ಕಾರಿನಲ್ಲಿ ತುಂಬಿಸಿ ಅದರ ಕುತ್ತಿಗೆಗೆ ಮತ್ತು ಕಾಲುಗಳಿಗೆ ಹಗ್ಗದಿಂದ ಹಿಂಸಾತ್ಮಕ ರೀತಿಯಲ್ಲಿ ಬಿಗಿದು ಕಟ್ಟಿ ಮಾಂಸ ಮಾಡುವ ಉದ್ದೇಶಕ್ಕಾಗಿ ಕೇರಳ ಕಡೆಗೆ ಅಕ್ರಮವಾಗಿ ಸಾಗಾಟ ಮಾಡಿರುವುದನ್ನು ಪಂಚರ ಸಮಕ್ಷಮ ಪತ್ತೆ ಮಾಡಿದ್ದಾರೆ.

ಸ್ವಾಧೀನಪಡಿಸಿಕೊಂಡಿರುವ ನಸು ಕೆಂಪು ಬಣ್ಣದ ದನದ ಗಂಡು ಕರುವಿನ ಅಂದಾಜು ಮೌಲ್ಯ ಸುಮಾರು 2000/- ರೂ ಗಳು, ಓಮ್ನಿ ಕಾರಿನ ಅಂದಾಜು ಮೌಲ್ಯ ಸುಮಾರು ಸುಮಾರು 1,50,000/- ರೂ ಗಳು ಹಾಗೂ ನೈಲಾನ್‌ ಹಗ್ಗಗಳು ಯಾವುದೇ ಬೆಲೆ ಬಾಳುವುದಿಲ್ಲ. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು 1,52,000/- ಆಗಿರುತ್ತದೆ.

- Advertisement -

Related news

error: Content is protected !!