Monday, April 29, 2024
spot_imgspot_img
spot_imgspot_img

ವಿದ್ಯಾರ್ಥಿಗಳಿಗೆ ಇನ್‌ಸ್ಟಾಗ್ರಾಂ ಮೂಲಕ ಮಕ್ಕಳ ನೀಲಿಚಿತ್ರದ ವಿಡಿಯೊ ರವಾನೆ; ಪೋಲಿ ಪ್ರೊಫೆಸರ್‌ ಮೇಲೆ ಬಿತ್ತು ಎಫ್‌ಐಆರ್‌

- Advertisement -G L Acharya panikkar
- Advertisement -

ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ವಿರುದ್ಧ ಚೈಲ್ಡ್ ಪೋರ್ನೊಗ್ರಫಿ ಕೇಸ್ ದಾಖಲಾಗಿದೆ. ಚೈಲ್ಡ್ ಪೋರ್ನೊಗ್ರಫಿ (ಮಕ್ಕಳ ನೀಲಿಚಿತ್ರ) ಬೇರೆಯವರಿಗೆ ಕಳಿಸಿದ್ದಕ್ಕೆ ಮಧುಸೂದನ್ ಆಚಾರ್ಯ ಎಂಬ ಪ್ರೊಫೆಸರ್ ವಿರುದ್ಧ ಕೇಸ್ ದಾಖಲಾಗಿದೆ. ಮಧುಸೂದನ್ ಆಚಾರ್ಯ ಅವರು ತಾವು ಕೆಲಸ ಮಾಡುವ ಕಾಲೇಜಿನ ಓರ್ವ ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಕಳಿಸಿದ್ದರು. ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡಿರುವುದು ಶಿಕ್ಷಾರ್ಹ ಅಪರಾಧ. ಆದ್ರೆ ಗೌರವಯುತ ಸ್ಥಾನದಲ್ಲಿರುವ ಪ್ರೊಫೆಸರ್ ತಮ್ಮ ವಿದ್ಯಾರ್ಥಿಗೆ ವಿಡಿಯೋ ಕಳಿಸಿದ್ದಾರೆ.

ವಿಡಿಯೋ ಕಳಿಸಿದ್ದನ್ನು ಮಾನಿಟರ್ ಮಾಡಿದ್ದ National Center For Missing and Exploited Children ಪೋರ್ಟೆಲ್ ನಂತ್ರ ಈ ಮಾಹಿತಿಯನ್ನು ಎನ್​ಸಿಆರ್​ಬಿಗೆ ನೀಡಿದೆ. ಬಳಿಕ ಎನ್​ಸಿಆರ್​ಬಿ ರಾಜ್ಯ ಸಿಐಡಿಗೆ ಸಿಡಿ ಸಹಿತ ಪ್ರಕರಣದ ಮಾಹಿತಿ ನೀಡಿದೆ. ನಂತರ ಸೈಬರ್ ಕ್ರೈಮ್ ಟಿಪ್ ಲೈನ್ ಅಡಿಯಲ್ಲಿ ಮಾಹಿತಿ ನೀಡಲಾಗಿದೆ. ಮಾಹಿತಿ ಅನ್ವಯ ತಾಂತ್ರಿಕ ತನಿಖೆ ನಡೆಸಿದ್ದ ಸಿಐಡಿ ಸೈಬರ್ ಕ್ರೈಮ್ ಪೊಲೀಸರು ವಿಚಾರಣೆ ವೇಳೆ ಯಲಹಂಕ ಬಳಿಯ ಪ್ರತಿಷ್ಠಿತ ಕಾಲೇಜಿನ ಬಗ್ಗೆ ಮಾಹಿತಿ ಸಿಕ್ಕಿದೆ.

ಐಪಿ ಅಡ್ರಸ್ ಸಹಿತ ಏರಿಯಾ ಪತ್ತೆ ಮಾಡಿದ್ದ ಪೊಲೀಸರು ನಂತ್ರ ಘಟನೆ ಸಂಬಂಧ ಈಶಾನ್ಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಕೇಸ್ ದಾಖಲು ಮಾಡಿದ ಸಿಇಎನ್ ಪೊಲೀಸರು ಕೇಸ್ ಸಂಬಂಧಿಸಿ ಪ್ರೊಫೆಸರ್ ಮಧುಸೂದನ್​ರನ್ನು ವಿಚಾರಣೆಗೆ ಕರೆಸಿ ವಿಚಾರಿಸಿದ್ದಾರೆ. ಆಗ ಕೃತ್ಯ ಬಯಲಾಗಿದೆ. ಪ್ರೊಫೆಸರ್ ಮಧುಸೂದನ್ ಹಲವಾರು ವಿದ್ಯಾರ್ಥಿಗಳನ್ನು ಕಾಮ ದೃಷ್ಟಿಯಿಂದ ಕಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಘಟನೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!