Monday, June 8, 2026
spot_imgspot_img
spot_imgspot_img

ವಿಧವೆಗೆ ಬಾಳು ಕೊಡುವುದಾಗಿ ಹೇಳಿ ಚಿನ್ನಾಭರಣಗಳನ್ನು ದೋಚಿದ ನಯವಂಚಕ

- Advertisement -
- Advertisement -

ವಿಧವೆಗೆ ಬಾಳು ಕೊಡುತ್ತೇನೆ. ಮದುವೆಯಾಗುತ್ತೇನೆ ಎಂದು ನಂಬಿಸಿ ಆಕೆಯ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಘಟನೆ ನಡೆದಿದೆ. ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಈ ಘಟನೆ ನಡೆದಿದ್ದು ಮೋಸ ಹೋದ ಪ್ರಿಯತಮೆ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರದೀಪ್ ಎಂಬಾತ ವಂಚನೆಗೈದ ಆರೋಪಿ. ಮಹಿಳೆಯ ಪತಿ ತೀರಿಹೋಗಿದ್ದು, ಹೆಣ್ಣು ಮಗು ಜೊತೆಗೆ ವಾಸವಿದ್ದಾರೆ. ಅವರನ್ನು ಪರಿಚಯ ಮಾಡಿಕೊಂಡು ಮನೆ ಸೇರಿಕೊಂಡ ವಿವಾಹಿತ ಪ್ರದೀಪ್, ನನಗೆ ಮದುವೆ ಆಗಿಲ್ಲ, ನಿನ್ನನ್ನೇ ಮದುವೆಯಾಗುವೆ ಎಂದು ಬಣ್ಣದ ಮಾತುಗಳಿಂದ ಮರುಳು ಮಾಡಿ ಪ್ರೀತಿಸುವೆ ಆಕೆಯ ಮನೆಯಲ್ಲೇ ಉಳಿದುಕೊಂಡಿದ್ದ. ನಂತರ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾಗಿದ್ದಾನೆ. ನಂತರ ಆರೋಪಿ ಪ್ರದೀಪ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!