Sunday, June 14, 2026
spot_imgspot_img
spot_imgspot_img

ವಿಮಾನದಲ್ಲಿ ನಟಿಗೆ ಲೈಂಗಿಕ ಕಿರುಕುಳ; ಉದ್ಯಮಿ ಖಾಕಿ ಬಲೆಗೆ!

- Advertisement -
- Advertisement -

ಮುಂಬೈ: ನಟಿಯೋರ್ವರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಡಿಯಲ್ಲಿ ಸಹ ಪ್ರಯಾಣಿಕ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಉತ್ತರ ಪ್ರದೇಶದ ಘಾಜಿಯಾಬಾದ್ ನಿವಾಸಿ, ಉದ್ಯಮಿ ನಿತಿನ್(36) ಎನ್ನಲಾಗಿದೆ.

ಅ.1ರಂದು ಮುಂಬೈ ನಿವಾಸಿಯ ನಟಿಯೋರ್ವರು ದೆಹಲಿಗೆ ಪ್ರಯಾಣ ಬೆಳೆಸಿದರು. ಅ.3ರಂದು ಮರಳಿ ದೆಹಲಿಯಿಂದ ಮುಂಬೈಗೆ ವಿಮಾನದ ಮೂಲಕ ಹಿಂತಿರುಗುತ್ತಿದ್ದ ವೇಳೆ ವಿಮಾನವು ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು.

ಈ ಹಿನ್ನೆಲೆ ಆಕೆ ಓವರ್ ಹೆಡ್ ಸ್ಟೋರೇಜ್ ನಿಂದ ತನ್ನ ಹ್ಯಾಂಡ್ ಬ್ಯಾಗ್ ತೆಗೆದುಕೊಳ್ಳುತ್ತಿದ್ದರು. ಆಗ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಸಹಪ್ರಯಾಣಿಕ ನಿತಿನ್ ನಟಿಯ ಸೊಂಟ ಹಿಡಿದು ತನ್ನೆಡೆಗೆ ಎಳೆದುಕೊಂಡ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ನಟಿ ತಕ್ಷಣ ವಿಮಾನದ ಸಿಬ್ಬಂದಿಗೆ ದೂರು ನೀಡಿದ್ದಾರೆ.

ಬಳಿಕ ಈಮೇಲ್ ಮೂಲಕ ನಟಿ ಏರ್ ಲೈನ್ಸ್ ಗೆ ದೂರು ನೀಡಿದ್ದಾರೆ. ವಿಮಾನ ನಿಲ್ದಾಣದಿಂದ ಹೊರಬಂದ ಬಳಿಕ ಸಹಾರ್ ಪೊಲೀಸ್ ಠಾಣೆಯಲ್ಲೂ ಲಿಖಿತ ದೂರು ನೀಡಿದ್ದರು. ಪೊಲೀಸರು ಪ್ರಕರಣದ ತನಿಖೆ ನಡೆಸಿ, ಆತನನ್ನು ಪೊಲೀಸ್ ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದಾರೆ. ತನಿಖೆಯಲ್ಲಿ ಆತ ಕೃತ್ಯ ಎಸಗಿರುವುದಾಗಿ ಕಂಡು ಬಂದಿರುವುದರಿಂದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

- Advertisement -

Related news

error: Content is protected !!