Wednesday, July 2, 2025
spot_imgspot_img
spot_imgspot_img

ವಿಮಾನ ನಿಲ್ದಾಣಗಳಲ್ಲಿ ಮುಖ ಸ್ಕ್ಯಾನ್ ಕಡ್ಡಾಯ; ಮೊದಲ ಹಂತದಲ್ಲಿ ಏಳು ಕಡೆ ಜಾರಿ

- Advertisement -
- Advertisement -

ನವದೆಹಲಿ: ಸಮಸ್ಯೆಮುಕ್ತ ವಿಮಾನ ಪ್ರಯಾಣಕ್ಕಾಗಿ ಡಿಜಿ ಯಾತ್ರಾ ವ್ಯವಸ್ಥೆಯನ್ನು ದೇಶದ ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸಲಾಗಿದೆ. ಪ್ರಯಾಣಿಕರ ಸಂಪರ್ಕರಹಿತ ಮತ್ತು ತಡೆರಹಿತ ಸಂಸ್ಕರಣೆಗಾಗಿ ಫೇಶಿಯಲ್ ರೆಕಗ್ನಿಷನ್ ಟೆಕ್ನಾಲಜಿ (ಎಫ್‌ಆರ್‌ಟಿ) ಆಧಾರದ ಮೇಲೆ ಇದನ್ನು ವಿನ್ಯಾಸಗೊಳಸಿಲಾಗಿದೆ.

ಮುಖದ ವೈಶಿಷ್ಟ್ಯಗಳನ್ನೇ ಬಳಸಿಕೊಂಡು ವಿಮಾನ ನಿಲ್ದಾಣಗಳಲ್ಲಿರುವ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ಪ್ರಯಾಣಿಕರು ಸಲೀಸಾಗಿ ತೆರಳಬಹುದು. ಇದನ್ನು ಬೋರ್ಡಿಂಗ್ ಪಾಸ್‌ನೊಂದಿಗೆ ಲಿಂಕ್ ಮಾಡುವ ಮೂಲಕ ಮುಖವನ್ನು ಸ್ಕ್ಯಾನ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ದೆಹಲಿ, ಬೆಂಗಳೂರು ಮತ್ತು ವಾರಣಾಸಿ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಆರಂಭವಾಗಿದ್ದು, ಮೊದಲ ಹಂತದಲ್ಲಿ ದೇಶದ ಏಳು ವಿಮಾನ ನಿಲ್ದಾಣಗಳಲ್ಲಿ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಹೀಗಾಗಿ ಹೈದರಾಬಾದ್, ಕೋಲ್ಕತ್ತಾ, ಪುಣೆ, ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಶೀಘ್ರ ಆರಂಭವಾಗಲಿದೆ. ಬಳಿಕ ದೇಶಾದ್ಯಂತ ಎಲ್ಲಾ ವಿಮಾನ ನಿಲ್ದಾಣಗಳಲ್ಲಿಯೂ ಜಾರಿಯಾಗಲಿದೆ.

ಆಧಾರ್‍ ದೃಢೀಕರಣ ಮತ್ತು ಸೆಲ್ಪೀ ಫೋಟೋಗಳನ್ನು ಡಿಜಿ ಯಾತ್ರಾ ಅಪ್ಲಿಕೇಶನ್‌‌ನಲ್ಲಿ ನೋಂದಣಿ ಮಾಡಿದರೆ ಸೌಲಭ್ಯ ಬಳಸಲು ಸಾಧ್ಯವಾಗುತ್ತದೆ. ಪ್ರಯಾಣಿಕರ ಗುರುತಿನ ಚೀಟಿ, ಪ್ರಯಾಣದ ಪುರಾವೆಗಳನ್ನು ಅವರ ಸ್ಮಾರ್ಟ್‌ಫೋನ್‌ನಲ್ಲಿ ಮಾತ್ರ ಸಂಗ್ರಹಿಸಿ ಮಾಹಿತಿ ಸುರಕ್ಷಿತವಾಗಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

Related news

error: Content is protected !!