Friday, May 3, 2024
spot_imgspot_img
spot_imgspot_img

ವಿ.ಹಿಂ.ಪ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡ ದೇವಿಪ್ರಸಾದ್ ಶೆಟ್ಟಿ

- Advertisement -G L Acharya panikkar
- Advertisement -

ಮಂಗಳೂರು: ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿ ದೇವಿ ಪ್ರಸಾದ್ ಶೆಟ್ಟಿ
ನಿಯುಕ್ತಿಗೊಂಡಿದ್ದಾರೆ. ಇವರ ಪುತ್ತೂರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡಿದ ದೇವಿ ಪ್ರಸಾದ್ ಶೆಟ್ಟಿ ಒಬ್ಬ ಸಂಘಟನಾ ಚತುರು.

ಪುತ್ತೂರು ತಾಲೂಕಿನಲ್ಲಿ ಎಬಿವಿಪಿ ಸಂಘಟನೆಯನ್ನು ಪ್ರಥಮ ಬಾರಿಗೆ ಕಾಲೇಜು ಯುವಕರನ್ನು ಸಂಘಟಿಸಲು ಕಾರಣಿಕರ್ತರಾದ ಇವರು ವಾಕ್ಚಾತುರ್ಯ ಹಿಂದುತ್ವದ ಮೂಲನಂಬಿಕೆ ದೇಶಪ್ರೇಮ ಎಲ್ಲವನ್ನು ಸವಿಸ್ತರವಾಗಿ ಯುವಕರಲ್ಲಿ ಮನದಟ್ಟುವ ಹಾಗೆ ಮಾಡಿದ್ದರು. ಪುತ್ತೂರು ತಾಲೂಕಿನ ಎಲ್ಲಾ ಕಾಲೇಜುಗಳಲ್ಲಿ ಎಬಿವಿಪಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆಯನ್ನು ತನ್ನ ಅವಿರತಾ ಶ್ರಮದಿಂದ ಸಂಘಟಿಸಿದರು..!

ಸೌಮ್ಯ ಭಟ್‌ ಕೊಲೆಗೈದ ಆರೋಪಿಗಳಿಗೆ ಸಿಂಹಸ್ವಪ್ನ..!
ನಾಗರ ಪಂಚಮಿಯ ದಿನದಂದು ವಿದ್ಯಾರ್ಥಿನಿ ಸೌಮ್ಯ ಭಟ್ ಎಂಬ ಯುವತಿಯನ್ನು ಒಬ್ಬ ಅನ್ಯಕೋಮಿನ ಯುವಕ ಕೊಲೆ ಮಾಡಿದ್ದ. ಸೂಕ್ತ ಕಾನೂನು ಕ್ರಮ ಕೈಗಳ್ಳಲು ಒತ್ತಾಯಿಸಿ ಯುವಕರನ್ನು ಬಡಿದೆಬ್ಬಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದರಲ್ಲಿ ಇವರು ಮುಂಚೂಣಿಯಲ್ಲಿದ್ದವರು. ಅಂದಿನ ಕಾಲದಲ್ಲಿ ಒಂದು ಸಂಘಟನೆ ಮಾಡುವುದು, ಹೋರಾಟ ನಡೆಸುವುದು ಅಷ್ಟು ಸುಲಭವಾಗಿರಲಿಲ್ಲ. ಹೋರಾಟದ ಕಿಚ್ಚು ಹಬ್ಬುತ್ತಿದ್ದಂತೆ ಪೊಲೀಸರ ಮೇಲೆ ಒತ್ತಡವೂ ಇಮ್ಮಡಿಯಾಯಿತು. ನಂತರ ಆರೋಪಿಯ ಬಂಧನವಾಯಿತು. ಆದರೆ ತಮ್ಮ ಹೋರಾಟದ ಫಲವಾಗಿ ಹೋರಾಟದಲ್ಲಿ ಪಾಲ್ಗೊಂಡ ಅದೆಷ್ಟು ಯುವಕರು ಜೈಲು ಸೇರಿದ್ದು ಕೂಡ ಸ್ಮರಣೀಯ..!

ಆರೋಪಿ ಕೆಲವು ಸಮಯಗಳ ಜೈಲುವಾಸ ಅನುಭವಿಸಿ ಕೋರ್ಟಿಗೆ ತರುವ ಸಮಯದಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಓಡಿ ಹೋದ. ಓಡಿ ಹೋದ ಆರೋಪಿಯನ್ನು ಮತ್ತೆ ಹುಡುಕಲು ಆರಂಭಿಸಿದ್ದೆ ಸಂಘಟನೆಯ ಯುವಕರು.. ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದರು. ಆದರೆ ವಿಪರ್ಯಾಸ ಎಂದರೆ ಬಂಧನವಾದ ಆರೋಪಿ ಕೆಲವೇ ತಿಂಗಳುಗಳಲ್ಲಿ ಜೈಲಿನಿಂದ ಪರಾರಿಯಾದ…! ಹಾಗೆ ಪರಾರಿಯಾದ ಆರೋಪಿಯನ್ನು ಇವತ್ತಿನವರೆಗೂ ಬಂಧನ ಮಾಡಲು ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ…!

ಹೀಗೆ ಅನೇಕ ಹೋರಾಟ, ಮುಂದಾಳುತ್ವ ವಹಿಸಿಕೊಂಡ ನಾಯಕ ದೇವಿಪ್ರಸಾದ್ ಶೆಟ್ಟಿ ಅವರು ವಿ.ಹಿಂ.ಪ ಮಂಗಳೂರು ವಿಭಾಗ ಕಾರ್ಯದರ್ಶಿಯಾಗಿ ನಿಯುಕ್ತಿಗೊಂಡಿದ್ದಾರೆ.

- Advertisement -

Related news

error: Content is protected !!