Wednesday, July 2, 2025
spot_imgspot_img
spot_imgspot_img

ವೋಟರ್ ಐಡಿಗೆ ಆಧಾರ್ ಲಿಂಕ್ ಆಗದಿದ್ದರೂ ಮತದಾನಕ್ಕೆ ಅವಕಾಶ; ಕೇಂದ್ರ ಸ್ಪಷ್ಟನೆ

- Advertisement -
- Advertisement -

ನವದೆಹಲಿ: ಮತದಾರರ ಗುರುತು ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಈ ಕುರಿತು ಲೋಕಸಭೆಯಲ್ಲಿ ಶುಕ್ರವಾರ ತಿಳಿಸಿದ ಕಾನೂನು ಸಚಿವ ಕಿರಣ್ ರಿಜಿಜು, ಚುನಾವಣಾ ಕಾನೂನುಗಳ (ತಿದ್ದುಪಡಿ) ಕಾಯಿದೆ 2021ರ ಪ್ರಕಾರ ಅಸ್ತಿತ್ವದಲ್ಲಿರುವ ಅಥವಾ ನಿರೀಕ್ಷಿತ ಮತದಾರರು ಸ್ವಯಂಪ್ರೇರಿತ ಆಧಾರದಲ್ಲಿ ಗುರುತು ಸ್ಥಾಪಿಸುವ ಉದ್ದೇಶದಿಂದ ಆಧಾರ್ ಸಂಖ್ಯೆ ನೀಡಲು ಕೇಳಲಾಗಿದೆ. ಈ ಕಾರ್ಯ ಆಗಸ್ಟ್ 1ರಿಂದಲೇ ನಡೆಯುತ್ತಿದೆ. ಆದರೆ ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡುವುದವರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದರು.

ಆಧಾರ್ ವಿವರ ಹಂಚಿಕೊಳ್ಳಲು ಸಮ್ಮತಿ ಹಿಂಪಡೆಯಲು ಅವಕಾಶ ಕಲ್ಪಿಸಲಾಗುವುದಿಲ್ಲ. ಯುಐಡಿಎಐ ಮಾರ್ಗಸೂಚಿಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಪಾಲಿಸುತ್ತದೆ. ಅಲ್ಲದೆ ಡೇಟಾ ಬೇಸ್‌ನಲ್ಲಿ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವುದಿಲ್ಲ. ದೃಢೀಕರಣದ ಉದ್ದೇಶಗಳಿಗಾಗಿ ಮಾತ್ರ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತದೆ ಎಂದವರು ತಿಳಿಸಿದರು.

- Advertisement -

Related news

error: Content is protected !!