Friday, May 17, 2024
spot_imgspot_img
spot_imgspot_img

ವ್ಯಾಕ್ಸಿನ್ ಕೊಟ್ಟವರಿಗೆ ದೇಶದ ಕೃತಜ್ಞತೆ; ಸೀರಂ ಹಾಗೂ ಭಾರತ್ ಬಯೋಟೆಕ್​​ಗೆ ಪದ್ಮಭೂಷಣ

- Advertisement -G L Acharya panikkar
- Advertisement -
suvarna gold

ದೇಶದಲ್ಲಿ ಇಂದು ಬರೋಬ್ಬರಿ 162 ಕೋಟಿ ಡೋಸ್​ಗಳಿಗಿಂತ ಅಧಿಕ ಕೊರೊನಾ ವ್ಯಾಕ್ಸಿನ್​ ಅನ್ನು ನೀಡಲಾಗಿದೆ. ವ್ಯಾಕ್ಸಿನ್ ಮೈತ್ರಿ ಹೆಸರಲ್ಲಿ 90ಕ್ಕೂ ಅಧಿಕ ರಾಷ್ಟ್ರಗಳಿಗೂ ಭಾರತ ವ್ಯಾಕ್ಸಿನ್ ಅನ್ನು ಪೂರೈಕೆ ಮಾಡಿದೆ. ಇವತ್ತು ದೇಶದಲ್ಲಿ ಪ್ರತಿನಿತ್ಯ ಲಕ್ಷಾಂತರ ಕೇಸ್​ಗಳು ದಾಖಲಾಗುತ್ತಿದ್ದರೂ, ಸಾವು-ನೋವಿನಲ್ಲಿ ಇಳಿಕೆ ಇರಲು ಪ್ರಮುಖ ಕಾರಣ ಅಂದ್ರೆ ವ್ಯಾಕ್ಸಿನ್​ಗಳು.

ಇಂದು ಇಡೀ ವಿಶ್ವದಲ್ಲಿಯೇ ಅತ್ಯಧಿಕ ಡೋಸ್​ಗಳಷ್ಟು ವ್ಯಾಕ್ಸಿನ್ ಅನ್ನು ಭಾರತ ನೀಡಿದೆ. ವಿಶ್ವದ ಶ್ರೀಮಂತ ರಾಷ್ಟ್ರಗಳು ಸ್ವಾರ್ಥ ಮೆರೆಯುತ್ತಿದ್ದಾಗ ಹಲವಾರು ರಾಷ್ಟ್ರಗಳಿಗೆ ವ್ಯಾಕ್ಸಿನ್ ನೀಡುವುದರ ಮೂಲಕ ಭಾರತ ಆಪತ್ಬಾಂಧವನಾಗಿ ಹೊರಹೊಮ್ಮಿದೆ. ವಿಶೇಷ ಅಂದ್ರೆ ಭಾರತ ವ್ಯಾಕ್ಸಿನ್​ನಲ್ಲಿ ಇಷ್ಟು ಸ್ವಾವಲಂಬಿಯಾಗಲು ಪ್ರಮುಖ ಕಾರಣ ಅಂದ್ರೆ, ಈ ವ್ಯಾಕ್ಸಿನ್​ಗಳು ಮೇಡ್​ ಇನ್ ಇಂಡಿಯಾ.

ಹೌದು ಇಡೀ ವಿಶ್ವದಲ್ಲಿ ಕೊರೊನಾ ತಾಂಡವವಾಡುತ್ತಿದ್ದಾಗ ಭಾರತದ ಎರಡು ಕಂಪನಿಗಳು ತಮ್ಮ ಸರ್ವಸ್ವವನ್ನೂ ಒತ್ತೆಯಿಟ್ಟು ವ್ಯಾಕ್ಸಿನ್ ಉತ್ಪಾದಿಸಲು ನಿರ್ಧರಿಸುತ್ತವೆ. ಅದ್ರಲ್ಲೂ ಪುಣೆಯ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ಅಂತೂ 2020ರ ಸೆಪ್ಟಂಬರ್​​ನಲ್ಲಿಯೇ ಇಂಗ್ಲೆಂಡ್​ನ ಆ್ಯಸ್ಟ್ರಾಝೆನಿಕಾ ಸಂಸ್ಥೆ ಜೊತೆ ಒಪ್ಪಂದ ಮಾಡಿಕೊಂಡು, ಟೆಸ್ಟ್​ ಸಂಪೂರ್ಣವಾಗದಿದ್ರೂ ಕೋಟಿಗಟ್ಟಲೇ ವ್ಯಾಕ್ಸಿನ್ ಉತ್ಪಾದಿಸಲು ಆರಂಭಿಸಿಬಿಡುತ್ತೆ. ಊಹಿಸಿ ನೋಡಿ ಒಂದು ವೇಳೆ ಈ ವ್ಯಾಕ್ಸಿನ್ ಏನಾದ್ರೂ ಎಫೆಕ್ಟಿವ್ ಅಲ್ಲದೇ ಹೋಗಿದ್ರೆ ಬಹುಶಃ ಇಡೀ ಸೀರಂ ಇನ್​ಸ್ಟಿಟ್ಯೂಟ್ ಮುಳುಗಿ ಹೋಗುವ ಸಾಧ್ಯತೆ ಇತ್ತು. ಆದರೂ ಈ ಸಂಸ್ಥೆ ರಿಸ್ಕ್ ತೆಗೆದುಕೊಳ್ಳುತ್ತೆ. ಆ ವ್ಯಾಕ್ಸಿನ್ನೇ ಕೋವೀ ಶೀಲ್ಡ್.

vtv vitla
vtv vitla

ಇನ್ನೊಂದೆಡೆ ಹೈದರಾಬಾದ್​ನ ಭಾರತ್​ ಬಯೋಟೆಕ್​​ ಸಂಸ್ಥೆ ಹಾಗೂ ಐಸಿಎಂಆರ್ ಜಂಟಿಯಾಗಿ ಸಂಪೂರ್ಣ ಭಾರತದ್ದೇ ಆದ ಭಾರತವೇ ತಯಾರಿಸಿದ ವ್ಯಾಕ್ಸಿನ್ ತಯಾರಿಸುತ್ತೆ. ಇದಕ್ಕೆ ಸ್ವದೇಶದಲ್ಲೇ ಹಲವು ಪಟ್ಟಭದ್ರ ಹಿತಾಸಕ್ತಿಗಳು ಅಡ್ಡಗಾಲು ಹಾಕಲು ಆರಂಭಿಸಿರುತ್ತವೆ. ಹಾಗಿದ್ರೂ ಈ ಸಂಸ್ಥೆ ಎದೆಗುಂದಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯೇ ಈ ಸಂಸ್ಥೆಯ ವ್ಯಾಕ್ಸಿನ್ ಪಡೆದುಕೊಳ್ಳುತ್ತಾರೆ. ಆ ವ್ಯಾಕ್ಸಿನ್ನೇ ಕೊವ್ಯಾಕ್ಸಿನ್..!

ಕೃತಜ್ಞತೆ ಮೆರೆದ ಕೇಂದ್ರ

ಈ ಸಂಸ್ಥೆಗಳ ತ್ಯಾಗ ಹಾಗೂ ಪ್ರಖರ ಸಂಕಲ್ಪದ ಕಾರಣದಿಂದಾಗಿ ಭಾರತದಲ್ಲಿ 2021ರ ಜನವರಿ 16 ರಿಂದ ವ್ಯಾಕ್ಸಿನೇಷನ್ ಆರಂಭವಾಗುತ್ತೆ. ಇಂದು ಇಡೀ ವಿಶ್ವವೇ ಭಾರತದ ವ್ಯಾಕ್ಸಿನ್​ಗೆ ಎದುರು ನೋಡುತ್ತಿದೆ. ಅಮೆರಿಕಾ ಸಹ ಬೂಸ್ಟರ್​ ಡೋಸ್​ಗಾಗಿ ಕೊವ್ಯಾಕ್ಸಿನ್ ಕೇಳುವಂತೆ ಈಗ ಆಗಿದೆ. ಈ ಎರಡೂ ಸಂಸ್ಥೆಗಳ ಈ ಸಾಧನೆಗೆ ಈಗ ಭಾರತ ಸರ್ಕಾರ ಕೂಡ ಗೌರವ ಅರ್ಪಿಸಿದೆ.

ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾದ ಛೇರ್​ಮನ್ ಸೈರಸ್ ಪೂನಾವಾಲಾ ಹಾಗೂ ಭಾರತ್​ ಬಯೋಟೆಕ್​ ಸಂಸ್ಥೆಯ ಮುಖ್ಯಸ್ಥರಾಗಿರೋ ಕೃಷ್ಣಾ ಎಲ್ಲಾ ಹಾಗೂ ಅವರ ಪತ್ನಿ ಸುಚಿತ್ರಾ ಎಲ್ಲಾ ಅವರಿಗೆ ಜಂಟಿಯಾಗಿ ಭಾರತ ಮೂರನೇ ಅತ್ಯಂತ ಎತ್ತರದ ನಾಗರಿಕ ಗೌರವ ಪದ್ಮಭೂಷಣವನ್ನು ನೀಡಿರೋದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

- Advertisement -

Related news

error: Content is protected !!