Sunday, May 12, 2024
spot_imgspot_img
spot_imgspot_img

ಶಾಲೆಯಲ್ಲಿ ಲೆಗ್ಗಿನ್ಸ್‌ ಪ್ಯಾಂಟ್‌ ವಿವಾದ; ಪೋಟೋ ಸಮೇತ ದೂರು ನೀಡಿದ ಶಿಕ್ಷಕಿ

- Advertisement -G L Acharya panikkar
- Advertisement -

ಕೇರಳ: ಶಾಲೆಗೆ ಲೆಗ್ಗಿನ್ಸ್​ ಧರಿಸಿಬಂದು ಪಾಠ ಮಾಡುತ್ತಿದ್ದ ಶಿಕ್ಷಕಿಗೆ ಶಾಲಾ ಮುಖ್ಯಶಿಕ್ಷಕಿ ಕೆಟ್ಟ ಶಬ್ದಗಳಿಂದ ನಿಂದಿಸಿ, ಮಾನಸಿಕ ಕಿರುಕುಳ ನೀಡಿದ್ದರು ಎಂದು ದೂರು ದಾಖಲಾಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಸರಿತಾ ರವೀಂದ್ರನಾಥ್​ ಎಂಬುವರು ಜಿಲ್ಲಾ ಶಿಕ್ಷಣಾಧಿಕಾರಿಗೆ ದೂರು ದಾಖಲಿಸಿದ್ದಾರೆ. ಸರಿತಾ ಅವರು ಕೇವಲ ಶಿಕ್ಷಕಿ ಮಾತ್ರವಲ್ಲ, ಮಿಸಸ್​ ಕೇರಳ ವಿಜೇತೆ ಅಗಿದ್ದಾರೆ. ಶಾಲೆಯಲ್ಲಿ ಹಿಂದಿ ಶಿಕ್ಷಕಿಯಾಗಿ ಸರಿತಾ ಸೇವೆ ಸಲ್ಲಿಸುತ್ತಿದ್ದಾರೆ. ದೂರಿನಲ್ಲಿರುವ ಪ್ರಕಾರ ಲೆಗ್ಗಿನ್ಸ್​ ಧರಿಸಿ ಬಂದಿದ್ದ ಸರಿತಾ ಮುಖ್ಯಶಿಕ್ಷಕಿ ರಾಮಲತಾ ಕಚೇರಿಗೆ ರಿಜಿಸ್ಟರ್‌ ಪುಸ್ತಕಕ್ಕೆ ಸಹಿ ಹಾಕಲು ತೆರಳಿದಾಗ ಕೆಟ್ಟ ಪದಗಳಿಂದ ನಿಂದಿಸಿದ್ದಾರೆ.

ನೀವು ಲೆಗ್ಗಿನ್ಸ್​ ಧರಿಸಿ ಬರುವುದರಿಂದ ಶಾಲೆಯ ಹೆಣ್ಣು ಮಕ್ಕಳು ಕೂಡ ಸರಿಯಾಗಿ ಉಡುಗೆ ತೊಡುವುದಿಲ್ಲ, ಈ ರೀತಿಯ ಉಡುಗೆ ಧರಿಸಿ ಬರುವಾಗ ಮಕ್ಕಳಿಗೆ ಸರಿಯಾಗಿ ಬಟ್ಟೆ ಧರಿಸುವಂತೆ ಹೇಳುವುದಾದರೂ ಹೇಗೆ ಎಂದು ರಾಮಲತಾ ಅವರು ಎಲ್ಲರ ಮುಂದೆಯೇ ಹೇಳಿದ್ದಾರೆ. ಸಮಸ್ಯೆ ಇರುವುದು ಸರಿತಾ ಅವರ ಪ್ಯಾಂಟ್​ನಲ್ಲಿ ಮತ್ತು ಅದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಬಟ್ಟೆಯಿಂದ ವ್ಯಕ್ತಿತ್ವವನ್ನು ಅಳೆದಿರುವುದು ಸರಿತಾರ ಅಸಮಾಧಾನಕ್ಕೆ ಕಾರಣವಾಗಿದೆ.

ಹದಿಮೂರು ವರ್ಷಗಳಿಂದ ನಾನು ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಬೋಧನೆಯ ವಿರುದ್ಧ ಅಥವಾ ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ದೂರುಗಳಿಲ್ಲ. ಮುಖ್ಯೋಪಾಧ್ಯಾಯರಿಗೂ ಅಂತಹ ಯಾವುದೇ ದೂರುಗಳು ಬಂದಿಲ್ಲ. ಸರ್ಕಾರ ಶಿಕ್ಷಕರಿಗೆ ಯಾವುದೇ ಸಮವಸ್ತ್ರವನ್ನು ನಿಗದಿಪಡಿಸಿಲ್ಲ. ಇಂತಹ ಸಂದರ್ಭದಲ್ಲಿ ಸಭ್ಯ ಉಡುಗೆ ತೊಟ್ಟವರ ವಿರುದ್ಧ ಮಾತನಾಡುವುದು ಅವಮಾನಕರ ಎಂದು ಸರಿತಾ ಬೇಸರ ಹೊರಹಾಕಿದ್ದಾರೆ.

ನಾನು ಸಭ್ಯವಾಗಿಯೇ ಡ್ರೆಸ್ ಹಾಕಿದ್ದೆ, ಅದಕ್ಕಾಗಿಯೇ ಆ ಡ್ರೆಸ್​ನಲ್ಲಿದ್ದ ಫೋಟೋ ತೆಗೆದು ತಾನು ನೀಡಿರುವ ದೂರಿನ ಜೊತೆಗೆ ಲಗತ್ತಿಸಿದ್ದೇನೆ ಎಂದು ಶಿಕ್ಷಕಿ ಹೇಳಿದ್ದಾರೆ. ಶಾಲೆಗೆ ಜೀನ್ಸ್ ಧರಿಸಿದ್ದಕ್ಕಾಗಿ ಯಾವುದೇ ಪುರುಷ ಶಿಕ್ಷಕರನ್ನು ನಿಂದಿಸುವುದನ್ನು ನಾನು ಇದುವರೆಗೂ ನೋಡಿಲ್ಲ ಎಂದು ಸರಿತಾ ಹೇಳಿದರು.

vtv vitla
- Advertisement -

Related news

error: Content is protected !!