Monday, July 7, 2025
spot_imgspot_img
spot_imgspot_img

ಶಿರ್ವ: ಸರಣಿ ಅಪಘಾತ ನಡೆಸಿದ ಟೆಂಪೋ ಪಲ್ಟಿ; ಪರಾರಿಯಾದ ಚಾಲಕನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಸ್ಥಳೀಯರು

- Advertisement -
- Advertisement -

ಶಿರ್ವ: ಗುಜರಿ ಸಾಗಿಸುತ್ತಿದ್ದ ಟೆಂಪೋವೊಂದು ಸರಣಿ ಅಪಘಾತ ನಡೆಸಿ ಬಳಿಕ ಪಲ್ಟಿಯಾದ ಘಟನೆ ಭಾನುವಾರ ಸಂಜೆ ನಡೆದಿದೆ.

  • ಕುತ್ಯಾರು ಸೂರ್ಯಚೈತನ್ಯ ಶಾಲೆಯ ಬಸ್‌ ತಂಗುದಾಣದ ಬಳಿ ಟೆಂಪೋ ಪಲ್ಟಿಯಾಗಿದೆ. ಇದಕ್ಕೂ ಮೊದಲು ಕುತ್ಯಾರು ಉಪ್ಪರಿಗೆ ಮನೆ ತಿರುವಿನ ಬಳಿ ಹೋಂಡಾ ಆಕ್ಟೀವಾಗೆ ಢಿಕ್ಕಿ ಹೊಡೆದಿತ್ತು. ಇದರಿಂದ ಆಕ್ಟೀವಾ ಚಾಲಕ ರಫೀಕ್ ಗಾಯಗೊಂಡಿದ್ದಾರೆ. ಸ್ವಲ್ಪ ಮುಂದೆ ಸಂಪತ್‌ಕುಮಾರ್ ಎಂಬವರ ಮನೆ ತಿರುವಿನ ಬಳಿ ಮತ್ತೊಂದು ಹೋಂಡಾ ಆಕ್ಟೀವಾಗೆ ಢಿಕ್ಕಿ ಹೊಡೆದು ಸದಾಶಿವ ಆಚಾರ್ಯ ಎಂಬವರು ಗಾಯಗೊಂಡಿದ್ದಾರೆ. ಅಲ್ಲದೆ ಸದಾಶಿವ ಆಚಾರ್ಯರ ಸ್ಕೂಟರ್ ಸಂಪೂರ್ಣ ಜಖಂಗೊಂಡಿದೆ.
  • ಎರಡು ಸ್ಕೂಟರ್‌ಗಳಿಗೆ ಢಿಕ್ಕಿ ಹೊಡೆಯಾದರೂ ಟೆಂಪೋ ಚಾಲಕ ನಿಲ್ಲಿಸದೇ ಸೀದಾ ಹೋಗಿದ್ದ. ಆದರೆ ಸೂರ್ಯಚೈತನ್ಯ ಶಾಲಾ ಬಸ್‌ ತಂಗುದಾಣದ ಬಳಿ ಟೆಂಪೋ ಪಲ್ಟಿಯಾಗಿದೆ. ಟೆಂಪೋ ಪಲ್ಟಿಯಾದ ಕೂಡಲೇ ಚಾಲಕ ಮುಲ್ಕಿ ಕೊಲ್ನಾಡು ನಿವಾಸಿ ಕಲಂದರ್ ಶಾ (38) ಅಲ್ಲಿಂದ ಪರಾರಿಯಾಗಿದ್ದು, ಕೂಡಲೇ ಕುತ್ಯಾರು ಗ್ರಾಮಸ್ಥರು ಆತನನ್ನು ಹಿಡಿದು ಶಿರ್ವ ಪೊಲೀಸರ ವಶಕ್ಕೆ ಒಪ್ಪಿಸಿದರು. ಪೊಲೀಸರ ಕೈಗೆ ಸಿಕ್ಕಿದ ಕೂಡಲೇ ಆತ ತನ್ನ ಹೆಸರು ರಾಜೇಶ ಎಂಬುದಾಗಿ ಸುಳ್ಳು ಹೇಳಿದ್ದ. ಬಳಿಕ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸಿದಾಗ ಹೆಸರು ಕಲಂದರ್‍ ಎಂಬುದಾಗಿ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಸ್ವಾಮೀಜಿ ಬಂಡೇಮಠದ ಬೆಟ್ಟದ ಮೇಲಿನ ಮನೆಯ ಕಿಟಕಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸದ್ಯ ಸ್ಥಳಕ್ಕೆ ಕುದೂರು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

- Advertisement -

Related news

error: Content is protected !!