Friday, May 3, 2024
spot_imgspot_img
spot_imgspot_img

ಶಿವಮೊಗ್ಗ: ಖೈದಿಗೆ ನೀಡಲು ತಂದಿದ್ದ ಬಟ್ಟೆ ಬ್ಯಾಗಿನಲ್ಲಿ ಗಾಂಜಾ ಪತ್ತೆ; ಮೂವರು ಆರೋಪಿಗಳ ಬಂಧನ

- Advertisement -G L Acharya panikkar
- Advertisement -

ಶಿವಮೊಗ್ಗ: ಖೈದಿಗೆ ನೀಡಲು ತಂದಿದ್ದ ಬಟ್ಟೆ ಬ್ಯಾಗಿನಲ್ಲಿ ಗಾಂಜಾ ಪತ್ತೆಯಾಗಿದೆ. ಪೊಲೀಸರ ಕಣ್ಣಪ್ಪಿಸಿ ಕೇಂದ್ರ ಕಾರಾಗೃಹದ ಒಳಗೆ ಗಾಂಜಾ ಸಾಗಣೆಗೆ ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಶಿವಮೊಗ, ಜೆ.ಪಿ.ನಗರದ ಮೊಹಮ್ಮದ್ ಮುಸಿಮಿನ್ (26), ರಾಜೀವ್ ಗಾಂಧಿ ಬಡಾವಣೆಯ ಅಬ್ದುಲ್ ಹಫೀಜ್ (24) ಮತ್ತು ಮೊಹಮ್ಮದ್ ಹುಸೇನ್ (22) ಎಂಬುವವರನ್ನು ಬಂಧಿಸಲಾಗಿದೆ.

ವಿಚಾರಣಾಧೀನ ಕೈದಿಯೊಬ್ಬನನ್ನು ಭೇಟಿಯಾಗಿ ಆತನಿಗೆ ಬಟ್ಟೆ ನೀಡಲು ಈ ಮೂವರು ಶಿವಮೊಗ್ಗ, ಕೇಂದ್ರ ಕಾರಾಗೃಹಕ್ಕೆ ಬಲದಿದರು.ಜೀನ್ಸ್ ಪ್ಯಾಂಟಿನ ಸೊಂಟದ ಭಾಗ ಮತ್ತು ಕಾಲಿನ ಭಾಗ ಶರ್ಟಿನ ಕಾಲ‌ ಭಾಗದಲ್ಲಿ ಗಾಂಜಾವನ್ನು ತುಂಬಿದ್ದರು. ಕೆಎಸ್‌ಐಎಸ್‌ಎಫ್ ಸಿಬ್ಬಂದಿ ತಪಾಸಣೆ ವೇಳೆ ಈ ವಿಚಾರ ಗೊತ್ತಾಗಿದೆ. ಬ್ಯಾಗ್ ಪರಿಶೀಲಿಸಿದ ಸಿಬ್ಬಂದಿಗೆ ಒಟ್ಟು 100 ಗ್ರಾಂ ಗಾಂಜಾ ಪತ್ತೆಯಾಗಿದೆ.

vtv vitla
- Advertisement -

Related news

error: Content is protected !!