Friday, May 17, 2024
spot_imgspot_img
spot_imgspot_img

ಶೈಕ್ಷಣಿಕ ಕ್ಷೇತ್ರಕ್ಕೂ ಬರಲಿದೆ 5G ಸೇವೆ, ಶಿಕ್ಷಣದಲ್ಲಿ ಇಂಗ್ಲಿಷ್​ಗಿಂತ ಸ್ಥಳೀಯ ಭಾಷೆ ಬಳಸಿ; ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ದೇಶದಲ್ಲಿ ಸ್ಥಳೀಯ ಭಾಷೆಗಳ ಬಳಕೆಯ ಬಗ್ಗೆ ಒತ್ತು ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇಂಗ್ಲಿಷ್ ಕೇವಲ ಸಂವಹನ ಮಾಧ್ಯಮವಾಗಿದೆ, ಬೌದ್ಧಿಕತೆಯ ಮಾನದಂಡವಲ್ಲ ಎಂದು ಬುಧವಾರ ಹೇಳಿದ್ದಾರೆ.ಗಾಂಧಿನಗರದ ಅದಾಲಾಜ್ ಪಟ್ಟಣದಲ್ಲಿ ಗುಜರಾತ್ ಸರ್ಕಾರದ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಇಂಗ್ಲಿಷ್ ಸಂವಹನ ಮಾಧ್ಯಮವಾಗಿದ್ದರೂ ಅದು ಬೌದ್ಧಿಕವಾಗಿ ಮಾನದಂಡವೆಂದು ಪರಿಗಣಿಸುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ಹಿಂದೆ ಇಂಗ್ಲಿಷ್ ಭಾಷೆಯ ಜ್ಞಾನವನ್ನು ಬೌದ್ಧಿಕತೆಯ ಗುರುತು ಎಂದು ಹೇಳಿದ್ದಾರೆ. ವಾಸ್ತವದಲ್ಲಿ, ಇಂಗ್ಲಿಷ್ ಭಾಷೆ ಕೇವಲ ಸಂವಹನ ಮಾಧ್ಯಮವಾಗಿದೆ ಎಂದು ಪ್ರಧಾನಿ ತಿಳಿಸಿದರು. ತಮ್ಮ ಭಾಷಣದ ಸಮಯದಲ್ಲಿ ಮೋದಿ ನಿರಂತರವಾಗಿ ಹಿಂದಿಯಲ್ಲಿ ಆರಾಮದಾಯಕವಾಗಿ ಮಾತನಾಡಿದ್ದಾರೆ, ಎಲ್ಲಿಯೂ ಇಂಗ್ಲಿಷ್‌ ಭಾಷೆಯನ್ನು ಬಳಸಿಲ್ಲ.

ಇಂಗ್ಲಿಷ್ ಭಾಷೆಯ ತೊಡಕಿನಿಂದಾಗಿ ಹಳ್ಳಿಗಳ ಅನೇಕ ಯುವ ಪ್ರತಿಭೆಗಳು ಇಂಗ್ಲಿಷ್‌ ಭಾಷೆಯಲ್ಲಿ ಪರಿಣತಿ ಇಲ್ಲದ ಕಾರಣ ವೈದ್ಯರು ಮತ್ತು ಎಂಜಿನಿಯರ್‌ ಆಗಲು ಸಾಧ್ಯವಾಗಿಲ್ಲ ಎಂದರು.ಹೊಸ ಶಿಕ್ಷಣ ನೀತಿಯು (ಎನ್‌ಇಪಿ) ದೇಶವನ್ನು ಇಂಗ್ಲಿಷ್ ಭಾಷೆಯನ್ನು ಸುತ್ತುವರೆದಿರುವ “ಗುಲಾಮ ಮನಸ್ಥಿತಿ”ಯಿಂದ ಹೊರತರಲಿದೆ ಎಂದು ಪ್ರಧಾನಿ ಭರವಸೆ ನೀಡಿದರು.

ಬಡವರ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯದಿದ್ದರೂ ಸಹ ವೈದ್ಯರು ಮತ್ತು ಇಂಜಿನಿಯರ್ ಆಗುವುದನ್ನು ನಾವು ನೋಡುವುದು ನಮ್ಮ ಗುರಿಯಾಗಿದೆ. ಇಂಗ್ಲಿಷ್ ಭಾಷೆಯ ಕೊರತೆಯಿಂದಾಗಿ ಯಾರೂ ಹಿಂದುಳಿಯಬಾರದು ಎಂಬುದನ್ನು ನಾನು ಬಯಸುತ್ತೇವೆ ಎಂದು ಮೋದಿ ಹೇಳಿದರು. ಕೇಂದ್ರದ ಹೊಸ ಶಿಕ್ಷಣ ನೀತಿಯು ಇಂಗ್ಲಿಷ್ ಭಾಷೆಗಿಂತ ಪ್ರಾದೇಶಿಕ ಭಾಷೆಯನ್ನು ಹೆಚ್ಚಾಗಿ ಬಳಸಿ.

ದೇಶದಲ್ಲಿ ಹೊಸದಾಗಿ ಪ್ರಾರಂಭಿಸಲಾದ 5G ಟೆಲಿಕಾಂ ಸೇವೆಗಳು ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಪ್ರಧಾನಿ ಹೇಳಿದರು. 5G ಸೇವೆಯು ಸ್ಮಾರ್ಟ್ ಸೌಲಭ್ಯಗಳು, ಸ್ಮಾರ್ಟ್ ತರಗತಿಗಳು ಮತ್ತು ಸ್ಮಾರ್ಟ್ ಬೋಧನೆಗಳನ್ನು ಆರಂಭವಾಗಲಿದೆ. ಇದು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಹೇಳಿದರು.

ಹಿಂದಿ ಭಾಷೆಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡುವ ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಹಿಂದಿಯಲ್ಲಿ ಮೂರು ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದ ಎರಡು ದಿನಗಳ ನಂತರ ಸ್ಥಳೀಯ ಭಾಷೆಗಳಲ್ಲಿ ಶಿಕ್ಷಣ ನೀಡಿ ಎಂದು ಮೋದಿ ಹೇಳಿದ್ದಾರೆ .

ಭೋಪಾಲ್‌ನಲ್ಲಿ ಎಂಬಿಬಿಎಸ್‌ಗಾಗಿ ಹಿಂದಿಯಲ್ಲಿ ವೈದ್ಯಕೀಯ ಜೀವರಸಾಯನಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ವೈದ್ಯಕೀಯ ಶರೀರಶಾಸ್ತ್ರ ವಿಷಯಗಳ ಪಠ್ಯಪುಸ್ತಕಗಳನ್ನು ಅನಾವರಣಗೊಳಿಸಿದ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಮಧ್ಯಪ್ರದೇಶವು ಎಂಬಿಬಿಎಸ್ ಹಿಂದಿ ಭಾಷೆಯಲ್ಲಿ (ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್) ಪ್ರಾರಂಭಿಸಿದ ದೇಶದ ಮೊದಲ ರಾಜ್ಯವಾಗಿದೆ ಎಂದು ಹೇಳಿದರು.

- Advertisement -

Related news

error: Content is protected !!