Wednesday, September 9, 2026
spot_imgspot_img
spot_imgspot_img

ಶ್ರೀ ರಾಮನಿಗೆ ಅವಮಾನ; ಬಿಜೆಪಿ ಶಾಸಕನ ನಡೆಗೆ ಕಾಂಗ್ರೆಸ್ ಕಿಡಿ

- Advertisement -
- Advertisement -

ಶ್ರೀರಾಮ ನವಮಿಯಂದೇ ಬಿಜೆಪಿ ಶಾಸಕ ಶರಣು ಸಲಗರ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ. ಶ್ರೀ ರಾಮನ ಮೂರ್ತಿಯ ತೊಡೆ ಮೇಲೆ ನಿಂತು ಅವಮಾನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಕಳೆದ ಗುರುವಾರ (ಮಾರ್ಚ್ 27) ಬಸವ ಕಲ್ಯಾಣದಲ್ಲಿ ನಡೆದ ಶ್ರೀರಾಮನವಮಿ ನಿಮಿತ್ತ ರಾಮನ ಮೂರ್ತಿಗೆ ಹಾರ ಹಾಕುವ ವೇಳೆ ಪ್ರತಿಮೆಯ ತೊಡೆಯ ಮೇಲೆರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಪ್ರತಿಮೆ ಮೇಲೇರಿದ ಸಲಗರ್ ಪ್ರತಿಮೆ ಮೇಲೆಯೇ ನಿಂತು ಮೊದಲು ರಾಮನಿಗೆ ಹಾರ ಹಾಕುತ್ತಾರೆ, ಆ ಬಳಿಕ ನಮಿಸುತ್ತಾರೆ. ಈ ವೇಳೆ ಅಲ್ಲಿದ್ದ ಅವರ ಬೆಂಬಲಿಗರು ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಶ್ರೀರಾಮನಿಗೆ ಬಿಜೆಪಿ ನೀಡುವ ಗೌರವ ಇದು. ಶಾಸಕ ಶರಣು ಸಲಗರ್ ಅವರು ಶ್ರೀರಾಮನ ಮೂರ್ತಿಯ ಮೇಲೆ ನಿಂತುಕೊಂಡು ಫೋಸ್ ಕೊಟ್ಟಿದ್ದಾರೆ. ಈ ಬಗ್ಗೆ ಬಿಜೆಪಿ ಕ್ಷಮಾಪಣೆ ಕೇಳುವ ಜೊತೆಗೆ ಹಿಂದೂ ವಿರೋಧಿ ಹಿನ್ನೆಲೆಯಲ್ಲಿ ಶಾಸಕನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಟ್ವೀಟ್ ಮೂಲಕ ಒತ್ತಾಯಿಸಿದ್ದಾರೆ.

ಇನ್ನ ಇದೇ ವಿಚಾರವಾಗಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ಮುಂದುವರಿಸಿದೆ. ಈ ಕುರಿತು ಟ್ವೀಟ್ ಮಾಡಿ, ರಾಮ ಮೂರ್ತಿಯ ಮೇಲೆಯೇ ಕಾಲಿಟ್ಟ ಬಿಜೆಪಿ ಶಾಸಕ ಶರಣು ಸಲಗರ ಅವರ ರಾಮಭಕ್ತಿ ಹೀಗಿದೆ! ಬಿಜೆಪಿಗೆ ‘ರಾಮ’ ಎಂದರೆ ಚುನಾವಣಾ ರಾಜಕೀಯದ ಸರಕು ಹೊರತು ನೈಜ ಭಕ್ತಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿಯ ಭಯಂಕರ ಧರ್ಮರಕ್ಷಕರಾದ ಸಿಟಿ ರವಿ, ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ನಳಿನ್ ಕುಮಾರ್ ಕಟೀಲ್ ಅವರುಗಳು ರಾಮನಿಗಾದ ಈ ಅಪಚಾರದ ಬಗ್ಗೆ ಬಾಯಿ ಬಿಡುತ್ತಿಲ್ಲವೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

- Advertisement -

Related news

error: Content is protected !!