Friday, April 26, 2024
spot_imgspot_img
spot_imgspot_img

ಸಂಸದ ನಳಿನ್ ಕುಮಾರ್ ಕಟೀಲ್ ಗೆ ಬಾಯಿ ತೊಳೆದುಕೊಳ್ಳಲು ಫಿನಾಯಿಲ್ ಕಳುಹಿಸಿಕೊಟ್ಟ ಕೊಪ್ಪಳದ ಮಹಿಳಾ ಘಟಕ.!

- Advertisement -G L Acharya panikkar
- Advertisement -

ಕೊಪ್ಪಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒಬ್ಬ ಮಾದಕ ವ್ಯಸನಿ ಹಾಗೂ ಡ್ರಗ್ ಪೆಡ್ಲರ್ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆ ವಿರೋಧಿಸಿ ಕೊಪ್ಪಳದ ಕಾಂಗ್ರೆಸ್ ಮಹಿಳಾ ಘಟಕ ವಿನೂತನ ಪ್ರತಿಭಟನೆ ನಡೆಸಿತ್ತು. ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯರು ನಳಿನ್ ಕುಮಾರ್ ಕಟೀಲ್ ಅವರಿಗೆ ಫಿನಾಯಿಲ್ ಕಳುಹಿಸಿಕೊಟ್ಟ ವಿಚಾರ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕೊಪ್ಪಳದ ಕಾಂಗ್ರೆಸ್ ಮಹಿಳಾ ಘಟಕ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಗಿಫ್ಟ್ ನೀಡಿದ್ದು, ಕಾಂಗ್ರೆಸ್ ಮಹಿಳಾ ಘಟಕದ ಸದಸ್ಯೆಯರು ನಳಿನ್ ಕುಮಾರ್ ಕಟೀಲ್ ಅವರಿಗೆ ಫಿನಾಯಿಲ್ ಕಳುಹಿಸಿಕೊಟ್ಟು ನಳಿನ್ ಕುಮಾರ್ ಕಟೀಲ್ ಅವರೇ ನಿಮ್ಮ ಬಾಯಿ ತೊಳೆದುಕೊಳ್ಳಿ ಎಂದು ಕೊಪ್ಪಳ ಅಂಚೆ ಕಚೇರಿ ಮೂಲಕ ಫಿನಾಯಿಲ್ ಬಾಟಲಿಯನ್ನು ನಳಿನ್ ಕುಮಾರ್ ಕಟೀಲ್ ಅವರಿಗೆ ಕಳುಹಿಸಿಕೊಡಲಾಗಿದ್ದು, ನಿಮ್ಮ ಹೊಲಸು ಬಾಯಿಯನ್ನು ಫಿನಾಯಿಲ್ ಹಾಕಿ ತೊಳೆದುಕೊಳ್ಳಿ ಎಂದು ಮಹಿಳಾ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

- Advertisement -

Related news

error: Content is protected !!