
ಮಂಗಳೂರು: ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಅವರಿಗೆ ವಾಟ್ಸಾಪ್ ವೀಡಿಯೋ ಮೆಸೇಜ್ ಮೂಲಕ ಬ್ಲಾಕ್’ಮೇಲ್ ಮಾಡಿದ ಆರೋಪದಲ್ಲಿ ಕರಾವಳಿ ಮೂಲದ ಖ್ಯಾತ ಜೋತಿಷಿಯೋರ್ವರ ಪುತ್ರನನ್ನು ಸೈಬರ್ ಕ್ರೈಂ ಪೊಲೀಸರಿಗೆ ಬಂಧಿಸಿದ್ದಾರೆ.

ಸಚಿವ ಎಸ್.ಟಿ.ಸೋಮಶೇಖರ್ ಪುತ್ರ ನಿಶಾಂತ್ ಅವರ ಹೇಳಿಕೆಯ ಪ್ರಕಾರ, ಕೆಲವು ದಿನಗಳ ಹಿಂದೆ ಅಪರಿಚಿತ ನಂಬರ್‌ನಿಂದ ವಾಟ್ಸಾಪ್‌ನಲ್ಲಿ 1 ವೀಡಿಯೋ ಮೆಸೇಜ್ ಬಂದಿತ್ತು. ಆ ವಿಡಿಯೋದಲ್ಲಿ ತನ್ನ ಫೋಟೋ ಎಡಿಟ್ ಮಾಡಿ ಕಳಿಸಿದ್ದರು. ಬಳಿಕ ವಾಟ್ಸಾಪ್ ಮೂಲಕ ತನಗೆ, ತಂದೆಗೆ ಬೆದರಿಕೆ ಹಾಕಿದ್ದಾರೆ. ಪಿಎಗೆ ಕಳಿಸಿ ಬೆದರಿಕೆ ಹಾಕಿದ್ದಾಗಿ ದೂರು ನೀಡಿದ್ದಾರೆ. 1 ಕೋಟಿ ನೀಡದಿದ್ದರೆ ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿದ್ದಾರೆ. ಈ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಿ ಸೈಬರ್ ಕ್ರೈಂ ಪೊಲೀಸರಿಗೆ ಎಸ್.ಟಿ.ಸೋಮಶೇಖರ್ ಪುತ್ರ ದೂರು ನೀಡಿದ್ದಾರೆ.

ಇನ್ನು ದೂರು ದಾಖಲಾಗುತ್ತಿದ್ದಂತೆ ಆರೋಪಿ ರಾಹುಲ್ ಭಟ್ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ 5 ದಿನ ಸಿಸಿಬಿ ವಶಕ್ಕೆ ಪಡೆಯಲಾಗಿದೆ. ದುಬೈನಿಂದ ವಾಪಸಾದ ಬಳಿಕ ರಾಹುಲ್ ಭಟ್ ನನ್ನು ವಶಕ್ಕೆ ಪಡೆದಿದ್ದು, ಮತ್ತೋರ್ವ ಆರೋಪಿ ಶಾಸಕರ ಪುತ್ರಿಗಾಗಿ ಹುಡುಕಾಟ ನಡೆಯುತ್ತಿದೆ.
ಈ ಕೇಸ್ ಬಗ್ಗೆ ತನಿಖೆ ವೇಳೆ ವಿಜಯಪುರ ಜಿಲ್ಲೆಯ ಓರ್ವ ಎಮ್ಎಲ್ಎ ಪುತ್ರಿ ಹೆಸರು ಪ್ರಸ್ತಾಪವಾಗಿದೆ. ಸದ್ಯ ಎಂಎಲ್ಎ ಮಗಳು ಲಂಡನ್ನಲ್ಲಿ ಇರುವುದಾಗಿ ಮಾಹಿತಿ ಸಿಕ್ಕಿದೆ. ಹಾಗೂ ಆರ್ಟಿ ನಗರದಲ್ಲಿ ನೆಲೆಸಿರುವ ಓರ್ವ ಅಸ್ಟ್ರಾಲಜಿಸ್ಟ್ ಪುತ್ರನನ್ನು ವಶಕ್ಕೆ ಪಡೆಯಲಾಗಿದೆ.
ಬಂಧನಕ್ಕೊಳಾಗಾದ ಪ್ರಮುಖ ಆರೋಪಿ ರಾಹುಲ್ ಭಟ್ ಉಡುಪಿ ಮೂಲದ ಖ್ಯಾತ ಜ್ಯೋತಿಷಿ ಚಂದ್ರಶೇಖರ ಗುರೂಜಿ ಅವರ ಪುತ್ರ.


