Sunday, June 29, 2025
spot_imgspot_img
spot_imgspot_img

ಸನ್ನಿ ಲಿಯೋನ್‌ ಭಾಗವಹಿಸಬೇಕಿದ್ದ ಫ್ಯಾಶನ್‌ ಶೋ ಸ್ಥಳದ ಸಮೀಪ ಬಾಂಬ್‌ ಸ್ಫೋಟ

- Advertisement -
- Advertisement -

ಇಂಫಾಲ್: ಬಾಲಿವುಡ್ ನಟಿ ಸನ್ನಿ ಲಿಯೋನ್ ಭಾಗವಹಿಸಬೇಕಿದ್ದ ಮಣಿಪುರದ ಇಂಫಾಲ್‌ನ ಫ್ಯಾಶನ್ ಶೋ ಸಮೀಪದಲ್ಲಿ ಪ್ರಬಲ ಸ್ಫೋಟ ಸಂಭವಿಸಿದೆ.

ಇಂಬಾಲ್‌ನ ಹಟ್ಟ ಕಂಜೇಲ್‌ ಬಂಗ್ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದ್ದು, ಯಾರಿಗೂ ಗಾಯಗಳಾದ ಬಗ್ಗೆ ವರದಿ ಬಂದಿಲ್ಲ. ಪ್ಯಾಶನ್ ಶೋ ನಡೆಯಬೇಕಿದ್ದ ಸ್ಥಳದಿಂದ ಕೇವಲ 100 ಮೀಟರ್ ದೂರದಲ್ಲಿ ಶನಿವಾರ ಸ್ಫೋಟ ಸಂಭವಿಸಿದೆ. ಭಾನುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ನಟಿ ಸನ್ನಿ ಲಿಯೋನ್ ಸಹ ಭಾಗವಹಿಸಬೇಕಿತ್ತು.

ಸುಧಾರಿತ ಸ್ಫೋಟಕ ಅಥವಾ ಗ್ರೆನೇಡ್ ಯಾವುದರಿಂದ ಸ್ಫೋಟ ಸಂಭವಿಸಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಈವರೆಗೆ ಯಾವುದೇ ಭಯೋತ್ಪಾದಕ ಸಂಘಟನೆ ಸ್ಫೋಟದ ಹೊಣೆ ಹೊತ್ತುಕೊಂಡಿಲ್ಲ

- Advertisement -

Related news

error: Content is protected !!