Friday, May 10, 2024
spot_imgspot_img
spot_imgspot_img

ಸರ್ಕಾರಿ ಕಚೇರಿಗಳಲ್ಲಿ ಫೋಟೋ, ವಿಡಿಯೋ ನಿಷೇಧ..! ರಾತ್ರಿಯಾಗುತ್ತಿದ್ದಂತೆ ಒತ್ತಡಕ್ಕೆ ಮಣಿದು ಆದೇಶ ವಾಪಸ್‌

- Advertisement -G L Acharya panikkar
- Advertisement -

ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ಫೋಟೋ ಮತ್ತು ವಿಡಿಯೋ ತೆಗೆಯುವಂತಿಲ್ಲ ಎಂಬ ಆದೇಶವನ್ನು ತಡರಾತ್ರಿ ಸರ್ಕಾರ ಹಿಂಪಡೆದಿದೆ.

ಇನ್ನು ಮುಂದೆ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅಪ್ಪಿತಪ್ಪಿಯೂ ವಿಡಿಯೋ ಚಿತ್ರೀಕರಣ ಇಲ್ಲವೇ ಫೋಟೋ ತೆಗೆಯುವಂತಿಲ್ಲ ಎಂಬುದಾಗಿ ಶುಕ್ರವಾರ ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಕಾರ್ಯದರ್ಶಿ ಕೆ.ವೆಂಕಟೇಶಪ್ಪ ಅವರು ಸುತ್ತೋಲೆ ಹೊರಡಿಸಿದ್ದರು. ಸರ್ಕಾರದ ವ್ಯಾಪ್ತಿಗೆ ಒಳಪಡುವ ಕಚೇರಿ ಸಮಯದಲ್ಲಿ ಅನುಮತಿ ಇಲ್ಲದೆ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ತೆಗೆಯುವುದು ಇಲ್ಲವೆ ವಿಡಿಯೋ ಚಿತ್ರೀಕರಣ ಮಾಡದಂತೆ ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿತ್ತು.

ಈ ಆದೇಶ ಹೊರ ಬರುತ್ತಿದ್ದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಕೆಲ ಅಧಿಕಾರಿಗಳು ಮಾಡುವ ಖತರ್ನಾಕ್ ಕೆಲಸವನ್ನು ಸಾರ್ವಜನಿಕರು ಚಿತ್ರೀಕರಿಸಿ ಬಟಾಬಯಲು ಮಾಡಿದ್ದರು. ಸರ್ಕಾರಿ ಕಛೇರಿಗಳಲ್ಲಿ ನಡೆಯುವ ಅಕ್ರಮಕ್ಕೆ ಬ್ರೇಕ್ ಹಾಕಲು ಮತ್ತು ಸಾಕ್ಷ್ಯ ಸಮೇತ ಭ್ರಷ್ಟ, ಕಾಮುಕ ಅಧಿಕಾರಿಗಳನ್ನು ರೆಡ್ ಹ್ಯಾಂಡ್‌ ಆಗಿ ಹಿಡಿಯಲು ಸ್ಟಿಂಗ್ ಆಪರೇಶನ್ ಮತ್ತು ಮೊಬೈಲ್ ಮೂಲಕ ಚಿತ್ರೀಕರಿಸಿ ತಕ್ಕ ಶಾಸ್ತಿ ಮಾಡಿದ್ದು ಗಮನಾರ್ಹ. ಇನ್ನು ಈ ರೀತಿಯ ಆದೇಶದಿಂದ ಕೆಲ ಅಧಿಕಾರಿಗಳು ಬೇಕಾಬಿಟ್ಟಿ ಇದ್ದು ರಾಜಾರೋಷವಾಗಿ ತಮ್ಮ ಖತರ್ನಾಕ್ ಬುದ್ಧಿಯನ್ನು ತೋರಿಸುತ್ತಾರೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದರು. ಅಂತೆಯೇ ಅನುಮತಿ ದೊರೆತು ಚಿತ್ರೀಕರಣ ಮಾಡುವಾಗ ಅವ್ಯವಹಾರ ನಡೆದೇ ಹೋಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಳಾಗಿತ್ತು. ಸದ್ಯ ರಾತ್ರೋರಾತ್ರಿ ಯೂ-ಟರ್ನ್‌ ಹೊಡೆದ ಸರ್ಕಾರ ಫೋಟೋ, ವಿಡಿಯೋ ನಿಷೇಧ ಆದೇಶವನ್ನ ಹಿಂಪಡೆದೆ.

ಸರ್ಕಾರಿ ಕಛೇರಿಗಳಲ್ಲಿ ಫೊಟೋ ವಿಡಿಯೋ ತೆಗೆಯುವಂತಿಲ್ಲ – ಹೊಸ ಆದೇಶ ಹೊರಡಿಸಿದ ಸರ್ಕಾರ

- Advertisement -

Related news

error: Content is protected !!