Wednesday, July 2, 2025
spot_imgspot_img
spot_imgspot_img

ಸರ್ಕಾರಿ ಶಾಲಾ ಶಿಕ್ಷಕನಿಂದ ಹಿಂದೂ ಮಕ್ಕಳ ಮತಾಂತರಕ್ಕೆ ಯತ್ನ; ಕೆಲಸದಿಂದ ಅಮಾನತು

- Advertisement -
- Advertisement -

ತಮಿಳುನಾಡು, ಕನ್ಯಾಕುಮಾರಿಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಶಿಕ್ಷಕನೋರ್ವ ವಿದ್ಯಾರ್ಥಿಗಳನ್ನು ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಿಸಲು ಯತ್ನಿಸಿರುವ ಘಟನ ನಡೆದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ನೌಕರಿಯಿಂದ ಅಮಾನತುಗೊಳಿಸಲಾಗಿದೆ.

ಕನ್ನಟ್ಟುವಿಲೈ, ಪ್ರದೇಶದಲ್ಲಿರುವ ಶಾಲೆಯಲ್ಲಿ 300ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡ್ತಿದ್ದಾರೆ. ಇಲ್ಲಿ ಹೊಲಿಗೆ ವಿಷಯದ ಕುರಿತಾಗಿ ಪಾಠ ಮಾಡುವ ಶಿಕ್ಷಕ ತಮ್ಮ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಕ್ರಿಶ್ಚಿಯನ್ ಪ್ರಾರ್ಥನ ಓದುವಂತೆ ಒತ್ತಾಯಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಹೊಲಿಗೆ ಸಂಬಂಧ ಪಾಠ ಹೇಳುವ ಬದಲು ಕ್ರಿಶ್ಚಿಯನ್ ಪ್ರಾರ್ಥನ ಓದಿಸುವ ಚಟುವಟಿಕೆಯಲ್ಲಿ ನಿರತರರಾಗಿದ್ದು, ಈ ವಿಷಯವನ್ನು ವಿದ್ಯಾರ್ಥಿಗಳು ಪೋಷಕರ ಗಮನಕ್ಕೆ ತಂದಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೂ ವಿದ್ಯಾರ್ಥಿಗಳು ಶಿಕ್ಷಕನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ, ಮುಖ್ಯೋಪಾಧ್ಯಾಯರಿಗೂ ದೂರು ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕನನ್ನು ನೌಕರಿಯಿಂದ ಅಮಾನತುಗೊಳಿಸಲಾಗಿದೆ.

- Advertisement -

Related news

error: Content is protected !!