Saturday, June 28, 2025
spot_imgspot_img
spot_imgspot_img

ಸುಪ್ರೀಂಕೋರ್ಟ್‌ನ 50ನೇ ಸಿಜೆಐ ಆಗಿ ನ್ಯಾಯಮೂರ್ತಿ ಚಂದ್ರಚೂಡ್‌ ಪ್ರಮಾಣ ವಚನ ಸ್ವೀಕಾರ

- Advertisement -
- Advertisement -

ನವದೆಹಲಿ: ಸುಪ್ರೀಂಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ. ಚಂದ್ರಚೂಡ್ ಅವರು ಅಧಿಕಾರ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ನ್ಯಾ. ಚಂದ್ರಚೂಡ್ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಸಿಜೆಐ ಆಗಿದ್ದ ಯು.ಯು. ಲಲಿತ್ ಅವರು ಇಂದು ನಿವೃತ್ತರಾಗಿದ್ದು, ಅವರ ಸ್ಥಾನವನ್ನು ನ್ಯಾ. ಚಂದ್ರಚೂಡ್ ಅಲಂಕರಿಸಿದ್ದಾರೆ. 2024 ರ ನವೆಂಬರ್‍ 10ರವರೆಗೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಿಜೆಐ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ. ಇವರ ತಂದೆ ಕೂಡಾ ದೇಶದ ಸಿಜೆಐ ಆಗಿ ಏಳು ವರ್ಷ ಕಾಲ ಅಂದರೆ, 1978 ಫೆಬ್ರವರಿ 22ರಿಂದ 1985ರ ಜುಲೈ 11ರವರೆಗೆ ಕಾರ್ಯ ನಿರ್ವಹಿಸಿದ್ದರು.

- Advertisement -

Related news

error: Content is protected !!