Saturday, April 20, 2024
spot_imgspot_img
spot_imgspot_img

ಬೇಯಿಸಿದ ಮೊಳಕೆ ಕಾಳು ಸೇವನೆಯಿಂದ ಆರೋಗ್ಯಕ್ಕೆ ಉತ್ತಮ ಟಿಪ್ಸ್

- Advertisement -G L Acharya panikkar
- Advertisement -

ಇತ್ತೀಚಿನ ದಿನಗಳಲ್ಲಿ ಪ್ರೋಟೀನ್‌ನ ಕೊರತೆಯಿಂದ ವಿವಿಧ ರೀತಿಯ ಸಮಸ್ಯೆಗಳು ಕಾಡುತ್ತಿವೆ. ಸಸ್ಯಾಹಾರಿಗಳಿಗೆ ಪ್ರೋಟೀನ್ ಲಭ್ಯತೆಯು ಕಡಿಮೆಯಾಗಿರುತ್ತದೆ. ಮಾಂಸಾಹಾರಿಗಳಿಗೆ ಮಾಂಸ, ಮೀನು, ಮೊಟ್ಟೆಗಳಿಂದ ಪ್ರೋಟೀನ್ ದೊರೆಯುತ್ತದೆ.ದೈಹಿಕವಾಗಿ ಸಂಪೂರ್ಣ ಬೆಳವಣಿಗೆಗೆ ಪ್ರೋಟೀನ್ ಬಹಳ ಅವಶ್ಯಕವಾದುದು. ಹೊಸ ಕೋಶಗಳು ರಚನೆಯಾಗಲು, ಕೋಶಗಳು ಪುನರುತ್ಪತ್ತಿಯಾಗಲು ಹಾಗೂ ಇನ್ನಿತರ ಅನೇಕ ಕ್ರಿಯೆಗಳಿಗೆ ಪ್ರೋಟೀನ್ ಬೇಕೇ ಬೇಕು. ಕೂದಲು ಉದುರುವಿಕೆಯಿಂದ ಹಿಡಿದು ಪ್ರೋಟೀನ್ ಎನರ್ಜಿ ಮಾಲ್ ನ್ಯೂಟ್ರಿಶನ್ ಅಥವಾ ಪ್ರೋಟೀನ್ ಕ್ಯಾಲೋರಿ ಮಾಲ್ ನ್ಯೂಟ್ರಿಶನ್ ಎಂದು ಕರೆಯಲ್ಪಡುವ ಎಲ್ಲ ತೊಂದರೆಗಳು ಸಾಮಾನ್ಯವಾಗಿ ಕಾಣಿಸುತ್ತವೆ. ಪ್ರೋಟೀನ್ ಕೊರತೆಯಿಂದ ಕಾಡುವ ತೊಂದರೆಗಳಿಂದ ಪಾರಾಗಲು ಪ್ರೋಟೀನ್ ಹೆಚ್ಚಾಗಿರುವ ಆಹಾರಸೇವನೆ ಒಳ್ಳೆಯ ಅಭ್ಯಾಸವಾಗಿದೆ.

ಒಳ್ಳೆಯ ಗುಣಮಟ್ಟದ ಪ್ರೋಟೀನ್ ಒದಗಿಸುವ ಪೋಷಕಾಂಶಗಳಿಂದ ಭರಿತವಾದಂತಹ ಪದಾರ್ಥ ಮೊಳಕೆಕಾಳುಗಳು, ಬೇಯಿಸಿದ ಮೊಳಕೆಕಾಳುಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪೋಷಕಾಂಶ ಲಭ್ಯವಾಗುತ್ತದೆ. ದೇಹದಲ್ಲಿ ಎಂಝುಮ್‌ಗಳ ಕ್ರಿಯೆಗಳನ್ನು ಚುರುಕುಗೊಳಿಸುತ್ತದೆ. ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ರೋಗನಿರೋಧಕ ವ್ಯವಸ್ಥೆಯ ವೃದ್ಧಿಗೆ, ಕಣ್ಣಿನ ಆರೋಗ್ಯಕ್ಕೆ, ಅಧಿಕ ರಕ್ತದೊತ್ತಡವನ್ನು ಹತೋಟಿ ಮಾಡಲು ಮೊಳಕೆಕಾಳುಗಳು ಅನುಕೂಲಕಾರಿ.

ಕೇವಲ ಮೊಳಕೆ ಬರಿಸಿದ ಕಾಳುಗಳ ಬದಲಾಗಿ ಮೊಳಕೆ ಬರಿಸಿದ ಕಾಳುಗಳನ್ನು ಬೇಯಿಸಿ ಸೇವಿಸುವುದರಿಂದ ಮೊಳಕೆಕಾಳಿನಲ್ಲಿನ ಎಲ್ಲ ಪೋಷಕಾಂಶಗಳನ್ನು ದೇಹವು ಚೆನ್ನಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿನಿತ್ಯ ಮಕ್ಕಳಿಗೆ ಬೇಯಿಸಿದ ಮೊಳಕೆಕಾಳುಗಳನ್ನು ಸೇವಿಸುವುದು ಉತ್ತಮವಾಗಿದೆ.

- Advertisement -

Related news

error: Content is protected !!