Thursday, June 18, 2026
spot_imgspot_img
spot_imgspot_img

ಸುಳ್ಯ: ಲಾರಿ, ಕಾರು, ಬೈಕ್ ನಡುವೆ ಸರಣಿ ಅಪಘಾತ; ಮೂವರಿಗೆ ಗಾಯ

- Advertisement -
- Advertisement -

ಸುಳ್ಯ: ಲಾರಿ, ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಹಾಗೂ ಕಾರು ಚಾಲಕ ಗಾಯಗೊಂಡ ಘಟನೆ ಸುಳ್ಯ-ಮಡಿಕೇರಿ ರಾಜ್ಯ ಹೆದ್ದಾರಿಯ ಪಾಲಡ್ಕ ಬಳಿ ನಡೆದಿದೆ.

ಕಾರೊಂದು ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ಲಾರಿಗೆ ಢಿಕ್ಕಿಯಾಗಿದ್ದು, ಈ ವೇಳೆ ಹಿಂದಿನಿಂದ ಬದ ಬೈಕ್ ಕಾರಿಗೆ ತಾಗಿದೆ‌. ಇದರಿಂದ ಬೈಕ್ ಸವಾರರಾದ ಪೆರಾಜೆ ದೊಡ್ಡಡ್ಕದ ದೀನರಾಜ್ ಹಾಗೂ ಕಂಜಿಪಿಲಿ ಪುರುಷೋತ್ತಮ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.

ಪುರುಷೋತ್ತಮ ಅವರ ಮೂಗಿನ ಭಾಗಕ್ಕೆ ಹಾಗೂ ದೀನರಾಜ್ ಅವರ ದೇಹ, ತಲೆಗೆ ಗಾಯವಾಗಿದೆ. ಇಬ್ಬರನ್ನೂ ಸುಳ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೊಂದೆಡೆ ಕಾರು ಲಾರಿಗೆ ಢಿಕ್ಕಿಯಾಗಿದ್ದರಿಂದ ಕಾರು ಚಾಲಕನೂ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!