Saturday, May 18, 2024
spot_imgspot_img
spot_imgspot_img

ಸುಳ್ಯ: ಸಮಸ್ಯೆಯ ಸುಳಿಯಲ್ಲಿ ಸಿಲುಕಿದ ಬೆಂಗಳೂರು‌ ಮೂಲದ ದಂಪತಿಯ ಪ್ರಾರ್ಥನೆಗೊಲಿದ ಕೊರಂಬಡ್ಕದ ಸ್ವಾಮಿ ಕೊರಗಜ್ಜ

- Advertisement -G L Acharya panikkar
- Advertisement -

ಬೆಂಗಳೂರಿನಿಂದ ಸುಳ್ಯಕ್ಕೆ ಬಂದ ದಂಪತಿಯ ಕಷ್ಟದ ಕಣ್ಣೀರ ಒರೆಸಿ ಕೈ ಹಿಡಿದ ಕಾರಣಿಕ ದೈವ ಕೊರಂಬಡ್ಕದ ಸ್ವಾಮಿ ಕೊರಗಜ್ಜ.
ಇದೇನಪ್ಪಾ ಅಂತ ಒಮ್ಮೆ ನಿಮಗೆ ಆಶ್ಚರ್ಯವಾಗಬಹುದು ಅಥವಾ ಸಂಶಯವು ಕಾಡಬಹುದು. ಆದರೆ ಇದು ಯಾವುದೋ ಕಟ್ಟು ಕಥೆಯಲ್ಲ ಇದು ರಿಯಲ್…

ಬೆಂಗಳೂರು ಮೂಲದ ವ್ಯಕ್ತಿ ವಿನಯ ಎಂಬಾತ ಕಳೆದ ಮೂರು ವರ್ಷದ ಹಿಂದೆ ಸುಳ್ಯದ ವ್ಯಕ್ತಿಯೊಬ್ಬರ ಬಳಿಯಿಂದ ಖರೀದಿಸಿದ್ದರು. ಕಾರನ್ನು ಖರೀದಿಸುವ ಸಂದರ್ಭದಲ್ಲಿ ಮುಂಗಡ ಹಣ ನೀಡಿ ಬಳಿಕ‌ ಉಳಿದ ಹಣ ಕಂತಿನ ಮೂಲಕ ಪಾವತಿ ಮಾಡುವುದರ ದಾಗಿ ಮಾತುಕತೆ ನಡೆದಿತ್ತು. ಕಾರಿನಲ್ಲಿ ಬಾಡಿಗೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಿನಯ್ ಸ್ವಲ್ಪ ಹಣದ ಅಡಚಣೆಯಾಗಿತ್ತು. ಉಳಿದ ಕಾರಿನ ಮೊತ್ತ ಪಾವತಿಸಲು ಕಷ್ಟ ಕರವಾಯಿತು. ಕಾರಿನ ಮೂಲ ವಾರಸುದಾರರು ಸುಳ್ಯದವರಾಗಿದ್ದು ಮಾತುಕತೆಯಂತೆ ನಿಗದಿಪಡಿಸಿದ ಕಾರಿನ ಬೆಲೆ ಪಾವತಿಸಲು ಬಾಕಿ ಮಾಡಿದ್ದಾರೆಂದು ಬೆಂಗಳೂರಿನಲ್ಲಿದ್ದ ಕಾರನ್ನು ಮತ್ತೆ ವಾಪಸು ತಂದು ತಮ್ಮ ಬಳಿ ಇರಿಸಿಕೊಂಡಿದ್ದರು. ಕಾರನ್ನು ನಮಗೆ ಮತ್ತೆ ಕೊಡಬೇಕೆಂದು ವಿನಯ ರವರು ಕೇಳಿಕೊಂಡರು. ಅದಕ್ಕೆ ಕಾರಿನ ವಾರಸುದಾರರು ಬಾಕಿ ಇರುವ ಮೊತ್ತದೊಂದಿಗೆ ಹೆಚ್ಚಿಗೆ ಹಣ ನೀಡಿದರೆ ಹಿಂತಿರುಗಿಸುವುದಾಗಿ ಹೇಳಿದ್ದರು.

ಇದರಿಂದ ನೊಂದ ವಿನಯ ಮತ್ತು ಆತನ ಪತ್ನಿ ಸಮಸ್ಯೆ ಬಗ್ಗೆ ಸುಳ್ಯದಲ್ಲಿ ಆತ್ಮೀಯರೊಬ್ಬರ ಜತೆ ಹೇಳಿದರು. ಅದಕ್ಕೆ ಪರಿಹಾರವೆಂಬಂತೆ ಸ್ಥಳೀಯ ವ್ಯಕ್ತಿ ಜಯನಗರದಲ್ಲಿ ಇರುವ ಕೊರಂಬಡ್ಕ ಶ್ರೀ ಕೊರಗಜ್ಜ ದೈವಸ್ಥಾನದಲ್ಲಿ ಪ್ರಾರ್ಥಿಸುವಂತೆ ಸಲಹೆ ನೀಡಿದರು. ಅದರಂತೆ ವಿನಯ ದಂಪತಿ ದೈವಸ್ಥಾನದ ಅರ್ಚಕರ ಸಮ್ಮುಖದಲ್ಲಿ ತಮಗಾದ ನೋವಿನ ವಿಚಾರ ತಿಳಿಸಿ ದೈವದ ಸಾನಿಧ್ಯದಲ್ಲಿ ಪ್ರಾರ್ಥಿಸಿದರು. ನ.14 ರಂದು ಪ್ರಾರ್ಥಿಸಿ ಹೋದ ದಂಪತಿಗೆ ನ.17 ರಂದು ಅಂದರೆ ಮೂರು ದಿನದ ಕಳೆದಂತೆ ಕಾರಿನ ಮೂಲ ವಾರಸುದಾರರು ಮಾತುಕತೆಗೆ ಬರುವಂತೆ ಕರೆ ಮಾಡಿದರು.

ಅವರ ಒಪ್ಪಿಗೆಯ ಮೇರೆಗೆ ಮಾತುಕತೆ ನಡೆಸಿ ಬಾಕಿ ಇರುವ ಹಣ ಎಷ್ಟು ಇತ್ತೋ ಅಷ್ಟೇ ‌ಪಾವತಿಸುವಂತೆ ತಿಳಿಸಿದರು. ಬಳಿಕ ದೈವಸ್ಥಾನದ ಮುಂದೆಯೇ ನಿಂತು ಕಾರಿನ ಕೀ ಮತ್ತು ಸಂಬಂಧಿಸಿದ ದಾಖಲೆ ಪತ್ರ ವನ್ನು ವಿನಯ ದಂಪತಿಗೆ ನೀಡಿದರು.
ಈ ಸಂದರ್ಭದಲ್ಲಿ ದೈವಸ್ಥಾನದ ಅರ್ಚಕ ಮತ್ತು ಸೇವಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕಷ್ಟದಿಂದ ಕಳೆದ ಕೆಲವು ಸಮಯಗಳಿಂದ ಬದುಕು ನಡೆಸಿಕೊಂಡು ಕಣ್ಣೀರಿನಲ್ಲೆ ಕಾಲ ಕಳೆದ ನಮಗೆ ಕೇವಲ ಮೂರೇ ದಿನದಲ್ಲಿ ಸ್ವಾಮಿ ಕೊರಗಜ್ಜ ದೈವವು ಅನುಗ್ರಹಿಸಿ ನಮ್ಮ ಸಮಸ್ಯೆ ಪರಿಹರಿಸಿ ನೆಮ್ಮದಿ ಕರುಣಿಸಿದ್ದಾರೆ. ಕ್ಷೇತ್ರದ ಹಾಗೂ ಪರಿಸರದ ಜನರು ನಮಗೆ ಸಹಾಯ ಮಾಡಿರುವುದನ್ನು ಸ್ಮರಿಸಿಕೊಂಡು ನಾವು ಇನ್ನೂ ಮುಂದೆ ಯಾವತ್ತಿದ್ದರೂ ಸ್ವಾಮಿ ಕೊರಗಜ್ಜ ದೈವದ ಭಕ್ತರಾಗಿ ಬದುಕು ಸಾಗಿಸುತ್ತೇವೆ ಎಂದು ಕೃತಾರ್ಥರಾಗಿ ದಂಪತಿ ಮತ್ತೆ ಬೆಂಗಳೂರಿನ ಕಡೆಗೆ ತೆರಳಿದರು.

ಇತ್ತೀಚಿನ ದಿನಗಳಲ್ಲಿ ತುಳುನಾಡಿನ ಪರಂಪರೆಯಲ್ಲಿ ದೈವದ ಕಾರಣಿಕ ಶಕ್ತಿ ಅಲ್ಲಲ್ಲಿ ನಮ್ಮ ಕಣ್ಣ ಮುಂದೆ ಗೋಚರವಾಗುವು ದಂತೂ ಸತ್ಯ.
ಶ್ರದ್ಧೆಭಕ್ತಿಯಿಂದ ದೈವ ದೇವರನ್ನು ನಂಬಿಕೊಂಡು ಬರುವ ನಮ್ಮಂತಹ ಮನುಜರನ್ನು ಸದಾ ಕಾಪಾಡುವ ಕೊರಂಬಡ್ಕದ ಸ್ವಾಮಿ ಕೊರಗಜ್ಜ ದೈವದ ಪವಾಡವೇ ಸರಿ.

vtv vitla
- Advertisement -

Related news

error: Content is protected !!