Wednesday, May 15, 2024
spot_imgspot_img
spot_imgspot_img

ಸ್ಕ್ರಾಪ್ ಬಳಸಿ ಪ್ರಧಾನಿ ಮೋದಿಯ ವಿಶೇಷ ಪ್ರತಿಮೆ ತಯಾರಿ; ಬೆಂಗಳೂರಲ್ಲಿ ಅಳವಡಿಸಲು ಸಿದ್ಧತೆ

- Advertisement -G L Acharya panikkar
- Advertisement -
driving

ಗುಂಟೂರು: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿ ಎಂಬಲ್ಲಿ ತಂದೆ ಮತ್ತು ಮಗ ಪ್ರಧಾನಿ ಮೋದಿಯ 14 ಅಡಿ ಎತ್ತರದ ವಿಶೇಷ ಪ್ರತಿಮೆಯೊಂದನ್ನ ನಿರ್ಮಾಣ ಮಾಡಿದ್ದಾರೆ. ಈ ಪ್ರತಿಮೆಯನ್ನ ಸ್ಕ್ರಾಪ್ ವಸ್ತುಗಳಿಂದ ತಯಾರಿಸಲಾಗಿದೆ. ಸದ್ಯದಲ್ಲೇ ಬೆಂಗಳೂರಿನಲ್ಲಿ ಈ ಪ್ರತಿಮೆಯನ್ನ ನಿರ್ಮಾಣ ಮಾಡಲಾಗುವುದು ಎಂಬ ಮಾಹಿತಿಯೂ ಇದೆ.

ಸೂರ್ಯ ಶಿಲ್ಪ ಶಾಲಾ ಹೆಸರಿನಲ್ಲಿ ಕಲೆಯ ವರ್ಕ್ ಶಾಪ್ ನಡೆಸುತ್ತಿರುವ ತಂದೆ ಮತ್ತು ಮಗ ಇಂಥ ವಿಶೇಷ ಪ್ರತಿಮೆಯೊಂದನ್ನ ನಿರ್ಮಾಣ ಮಾಡಿದ್ದಾರೆ. ಇನ್ನು ಈ ಪ್ರತಿಮೆಗಾಗಿ 10-15 ಆರ್ಟಿಸ್ಟ್​ಗಳು ಎರಡು ತಿಂಗಳ ಕಾಲ ಶ್ರಮವಹಿಸಿ ಈ ಪ್ರತಿಮೆ ನಿರ್ಮಿಸಿದ್ದಾರೆ ಎಂಬ ಮಾಹಿತಿ ಇದೆ. ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಮೋಹನ್ ರಾಜು ಎಂಬುವವರ ಅಪೇಕ್ಷೆಯ ಮೇರೆಗೆ ಈ ಪ್ರತಿಮೆ ನಿರ್ಮಿಸಲಾಗಿದೆಯಂತೆ.

ವೆಂಕಟೇಶ್ವರ ರಾವ್ ಮತ್ತು ಟೀಂ ಈ ಪ್ರತಿಮೆಯನ್ನು ನಿರ್ಮಿಸಿದ್ದು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಕ್ರ್ರಾಪ್ ಮೂಲಕ ಕಲಾಕೃತಿಗಳನ್ನು ತಯಾರಿಸುವ ಮೂಲಕ ಗಮನ ಸೆಳೆದಿದ್ದಾರಂತೆ. ಕಳೆದ 12 ವರ್ಷಗಳಲ್ಲಿ ಈ ತಂಡ 100 ಟನ್​ನಷ್ಟು ಕಬ್ಬಿಣದ ಸ್ಕ್ರಾಪ್​ಗಳನ್ನು ಬಳಸಿ ಕಲಾಕೃತಿಗಳನ್ನ ರಚಿಸಿದ್ದಾರಂತೆ. ಮೋದಿ ಪ್ರತಿಮೆ ನಿರ್ಮಾಣಕ್ಕೂ ಮುನ್ನ 75,000 ನಟ್​ಗಳನ್ನು ಬಳಸಿ 10 ಅಡಿಯ ಮಹಾತ್ಮಾ ಗಾಂಧಿ ಪ್ರತಿಮೆ ತಯಾರಿಸಿ ವಿಶ್ವದಾಖಲೆ ಬರೆದಿದ್ದಾರೆ.

- Advertisement -

Related news

error: Content is protected !!