Friday, May 17, 2024
spot_imgspot_img
spot_imgspot_img

ಹಂದಿಜ್ವರಕ್ಕೆ 9 ತಿಂಗಳ ತುಂಬು ಗರ್ಭಿಣಿ ಬಲಿ

- Advertisement -G L Acharya panikkar
- Advertisement -

ಮೈಸೂರು : 9 ತಿಂಗಳ ತುಂಬು ಗರ್ಭಿಣಿಯೊಬ್ಬರು ಎಚ್‌1 ಎನ್‌1 (ಹಂದಿ ಜ್ವರ ) ಸೋಂಕಿಗೆ ಬಲಿಯಾದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಹುಣಸೂರು ತಾಲೂಕು ಕೋಣನಹೊಸಹಳ್ಳಿ ಗ್ರಾಮದ ಸ್ವಾಮಿನಾಯ್ಕ ಎಂಬುವರ ಪುತ್ರಿ ಛಾಯಾ ಮೃತರು, ಛಾಯಾಗೆ 4 ವರ್ಷದ ಗಂಡು ಮಗು ಇದೆ. 2ನೇ ಮಗುವಿನ ನಿರೀಕ್ಷೆಯಲ್ಲಿ ಕುಟುಂಬವಿತ್ತು.

ಇನ್ನೂ ಕೆಲವೇ ದಿನದಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಛಾಯಾ ಗೆ ಎಚ್‌1 ಎನ್‌1 ಸೋಂಕು ತಗುಲಿತ್ತು. ಛಾಯಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಗುರುವಾರ ಕೊನೆಯುಸಿರೆಳೆದಿದ್ದಾರೆ.

- Advertisement -

Related news

error: Content is protected !!