Saturday, May 11, 2024
spot_imgspot_img
spot_imgspot_img

ಹಪ್ತಾ ಕೊಡಲು ನಿರಾಕರಣೆ; ಬೆಳ್ತಂಗಡಿ ಮೂಲದ ಅಂಗಡಿ ಮಾಲಕರ ಮೇಲೆ ಲಾಂಗ್‌ ಬೀಸಿದ ರೌಡಿ

- Advertisement -G L Acharya panikkar
- Advertisement -
vtv vitla

ಬೆಂಗಳೂರು: ಹಫ್ತಾ ನೀಡಲಿಲ್ಲ ಎನ್ನುವ ಕಾರಣಕ್ಕೆ ರೌಡಿಯೊಬ್ಬ ಮೀನಿನ ಅಂಗಡಿ   ಸಿಬ್ಬಂದಿ ಮೇಲೆ ಲಾಂಗ್ ಬೀಸಿದ ಘಟನೆ ಬೆಂಗಳೂರಿನ ಬಾಣಸವಾಡಿಯ ಜೈ ಭಾರತ್ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.

ರೌಡಿ ಸುಜೀತ್ ಎಂಬಾತ ನಿನ್ನೆ ರಾತ್ರಿ ಬಾಣಸವಾಡಿಯ ಜೈ ಭಾರತ್ ನಗರದಲ್ಲಿರುವ ಮೀನಿನ ಅಂಗಡಿ ಬಳಿ ಬಂದು ಹಫ್ತಾ ಕೇಳಿದ್ದಾನೆ. ಈ ವೇಳೆ ಮೀನಿನ ಅಂಗಡಿ ಸಿಬ್ಬಂದಿ ಹಪ್ತಾ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸುಜೀತ್ ಲಾಂಗ್ ಬೀಸಿ ಪುಂಡಾಟ ಮೆರೆದಿದ್ದಾನೆ.

ಘಟನೆಯ ಬಳಿಕ ಬಾಣಸವಾಡಿ ಪೊಲೀಸರು ಆರೋಪಿ ಫ್ರೇಜರ್ ಟೌನ್ ನಿವಾಸಿ ಸುಜೀತ್‍ನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಮೀನಿನ ಅಂಗಡಿ ಮಾಲೀಕ ಮತ್ತು ಸುಜೀತ್ ನಡುವೆ ಹಣದ ವಿಚಾರಕ್ಕೆ ಗಲಾಟೆ ನಡೆದಿತ್ತು. ಹಾಗಾಗಿ ನಿನ್ನೆ ಸುಜೀತ್ ತಲ್ವಾರ್ ಹಿಡಿದು ಅಂಗಡಿಯಲ್ಲಿದ್ದ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿರುವ ಬಗ್ಗೆ ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿರುವ ಸದಾಶಿವ ಫಿಶ್ ಅಂಗಡಿ ಮಾಲೀಕ ಬೆಳ್ತಂಗಡಿ ಮೂಲದ ಮನೋಜ್, ಪ್ರತಿದಿನ ಇಲ್ಲಿ ಪುಡಿರೌಡಿಗಳು ಬಂದು ಹಫ್ತಾ ಕೇಳ್ತಾರೆ. ಈತ ಕೂಡ ದಿನಾ ಬಂದು ಹಣ ಕೊಡಿ ಅಂತಾನೆ. ಈ ಹಿಂದೆ ಸಾಕಷ್ಟು ಭಾರಿ ಹಣ ನೀಡಿದ್ದೇವೆ. ನಿನ್ನೆ ಕೂಡ ಬಂದು ಹಣ ನೀಡುವಂತೆ ಗಲಾಟೆ ಕೇಳಿದ್ದಾನೆ. ನಾವು ಹಣ ನೀಡಲಿಲ್ಲ ಅನ್ನೋ ಕಾರಣಕ್ಕೆ ಮಧ್ಯಾಹ್ನದ ವೇಳೆ ಬಂದು ನಮ್ಮ ಸಿಬ್ಬಂದಿ ಬೈಕ್‍ಗಳನ್ನು ಒದ್ದು ಗಲಾಟೆ ಮಾಡಿ ಹೋಗಿದ್ದಾನೆ. ರಾತ್ರಿ ಮತ್ತೆ ಬಂದು ಏಕಾಏಕಿ ಲಾಂಗ್ ಬೀಸಿ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಇಲ್ಲಿ ಪುಡಿ ರೌಡಿಗಳ ಹಾವಳಿ ಜಾಸ್ತಿ ಇದೆ. ಜೀವನ ಮಾಡೋಕೆ ದೂರದ ಊರುಗಳಿಂದ ಬಂದಿದ್ದೀವಿ. ನಮಗೆ ಇಲ್ಲಿ ತುಂಬಾ ತೊಂದರೆ ಆಗುತ್ತಿದೆ. ಪೊಲೀಸರಿಗೆ ಹೇಳಿದರೆ ಯಾವುದೇ ಪ್ರಯೋಜನ ಇಲ್ಲ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

ಘಟನೆಯ ದೃಶ್ಯಗಳು ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಬಾಣಸವಾಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

- Advertisement -

Related news

error: Content is protected !!