Wednesday, July 9, 2025
spot_imgspot_img
spot_imgspot_img

ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ಜೋಡಿ; “ಸಿಂಹ-ಪ್ರಿಯಾ” ಮದುವೆಯಲ್ಲಿ ಶಿವಣ್ಣ , ಡಾಲಿ ಧನಂಜಯ್‌ ಸೇರಿದಂತೆ ಹಲವು ಗಣ್ಯರು ಭಾಗಿ

- Advertisement -
- Advertisement -
vtv vitla

ಸ್ಯಾಂಡಲ್ ವುಡ್ ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಂದು ವೈವಾಹಿಕ ಜೀವನಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಕಾಲಿಟ್ಟರು

ಹರಿಪ್ರಿಯಾ ಮತ್ತು ವಸಿಷ್ಠ ಮದುವೆಯ ಸುಂದರ ಫೋಟೋಗಳು ರಿವೀಲ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇಬ್ಬರು ಸರಳವಾಗಿ ಹಸೆಮಣೆ ಏರಿದ್ದು ಫೋಟೋಗಳು ಎಲ್ಲಾ ಕಡೆ ಹರಿದಾಡುತ್ತಿವೆ. ವಸಿಷ್ಠ ಮತ್ತು ಹರಿಪ್ರಿಯಾ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಗಣ್ಯರು ಹಾಜರಾಗಿದ್ದರು. ಗೆಳೆಯ ಧನಂಜಯ್, ಅಮೃತಾ ಐಯ್ಯಂಗರ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಗೆಳೆಯನ ಮದುವೆಯಲ್ಲಿ ನಟ ಧನಂಜಯ್ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ವಸಿಷ್ಠ ಮತ್ತು ಹರಿಪ್ರಿಯಾ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಪ್ರೀತಿಯ ಚಿಟ್ಟೆ ಹಾಗೂ ಹರಿಪ್ರಿಯಾ ಅವರಿಗೆ ಮದುವೆ ಶುಭಾಶಯಗಳು ಎಂದು ಹೇಳಿದ್ದಾರೆ.

ಅರಶಿಣ ಶಾಸ್ತ್ರದ ಪೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅರಿಶಿಣ ಶಾಸ್ತ್ರದಲ್ಲಿ ಬಿಳಿ ಬಣ್ಣದ ಡ್ರೆಸ್‌ ತೊಟ್ಟು ನವಜೋಡಿಗಳು ಕಂಗೊಳಿಸಿದ್ದರು.

2016ರಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಮೊದಲು ಭೇಟಿಯಾಗಿದ್ದು, ಸ್ನೇಹಿತರಾಗಿದ್ದ ಇಬ್ಬರೂ ಬಳಿಕ ಪ್ರೇಮಿಗಳಾದರು. ವಸಿಷ್ಠ ಅವರೇ ಮೊದಲು ಪ್ರಪೋಸ್ ಮಾಡಿದ್ದು ಎಂದು ಹೇಳಿಕೊಂಡಿದ್ದರು. ಇದೀಗ ಇಬ್ಬರೂ ಪತಿ-ಪತ್ನಿಯಾಗಿದ್ದಾರೆ.

- Advertisement -

Related news

error: Content is protected !!