Saturday, April 20, 2024
spot_imgspot_img
spot_imgspot_img

ಹಿಜಾಬ್ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ಸ್ವರ್ಧಿಯ ಮನೆ ಧ್ವಂಸಗೊಳಿಸಿ ವಿಕೃತಿ

- Advertisement -G L Acharya panikkar
- Advertisement -

ಹಿಜಾಬ್ ಧರಿಸದೇ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಹಿಳೆಯ ಮನೆಯನ್ನು ಅಧಿಕಾರಿಗಳು ಕೆಡವಿದ ಘಟನೆ ನಡೆದಿದೆ. ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ 33 ವರ್ಷದ ಎಲ್ನಾಜ್ ರೆಕಾಬಿ ಹಿಜಾಬ್ ಧರಿಸದೇ, ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿ ಸುದ್ದಿ ಆಗಿದ್ದರು.

ಇರಾನ್‌ನ ರಾಕ್ ಕ್ಲೈಂಬರ್ ಎಲ್ನಾಜ್ ರೆಕಾಬಿ (Elnaz Rekabi) ಅವರ ಮನೆಯನ್ನು ಅಧಿಕಾರಿಗಳು ಕೆಡವಿದ್ದಾರೆ. ನೈತಿಕತೆಯ ಪೊಲೀಸರ ವಶದಲ್ಲಿದ್ದ 22 ವರ್ಷದ ಮಹ್ಸಾ ಅಮಿನಿಯ ಮರಣದ ನಂತರ ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಕೆಲವು ಇರಾನಿನ ಪ್ರತಿಭಟನಾಕಾರರು ರೆಕಾಬಿಯನ್ನು ರಾಷ್ಟ್ರೀಯ ದಂಗೆಯ ಸಂಕೇತವಾಗಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯಕ್ಕಾಗಿ ಕರೆ ನೀಡಿದ್ದರು. ಆದರೂ ಸಹ ಟೆಹ್ರಾನ್‌ಗೆ ಹಿಂದಿರುಗಿದಾಗ ಮಾನವ ಹಕ್ಕುಗಳ ಗುಂಪುಗಳು ಆಕೆಯ ಸುರಕ್ಷತೆಯ ಬಗ್ಗೆ ಭಯವನ್ನು ವ್ಯಕ್ತಪಡಿಸಿದವು.

ಅಂದು ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ರೆಕಾಬಿ ʻಚಾಂಪಿಯನ್‌ಶಿಪ್‌ನಲ್ಲಿ ಹಿಜಾಬ್‌ ಆಕಸ್ಮಿಕವಾಗಿ ನನ್ನ ತಲೆಯಿಂದ ಜಾರಿದೆ. ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆʼ ಎಂದು ಬರೆದುಕೊಂಡಿದ್ದರು.

- Advertisement -

Related news

error: Content is protected !!