Wednesday, April 24, 2024
spot_imgspot_img
spot_imgspot_img

ಹಿಜಾಬ್ V/S ಕೇಸರಿ ಶಾಲು ವಿವಾದ; ರಾಜ್ಯ ಹೈಕೋರ್ಟ್​ನಲ್ಲಿ 2:30ಕ್ಕೆ ವಿಚಾರಣೆ ಆರಂಭ

- Advertisement -G L Acharya panikkar
- Advertisement -

ಹಿಜಾಬ್ v/s ಕೇಸರಿ ಶಾಲು ವಿವಾದದಿಂದ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ ಮತ್ತೆ ಆರಂಭವಾಗಿದೆ. ಆತಂಕದಲ್ಲಿಯೇ ಶಿಕ್ಷಣ ಇಲಾಖೆ ಫ್ರೌಢ ಶಾಲೆಗಳ ಆರಂಭಕ್ಕೆ ಮುಂದಾಗಿದೆ. ಬಿಗಿ ಭದ್ರತೆಯಲ್ಲಿ ಇಂದಿನಿಂದ 9 ಮತ್ತು 10 ನೇ ತರಗತಿ ಆರಂಭವಾಗಿದೆ.

ಹಿಜಾಬ್ ಸಂಘರ್ಷದಿಂದ ಸರ್ಕಾರ ಸುಮಾರು ನಾಲ್ಕು ದಿನ ರಜೆ ನೀಡಿತ್ತು. ಶಾಲಾ ಆವರಣದಲ್ಲಿ ಸಮವಸ್ತ್ರ ಕಡ್ಡಾಯ ಮಾಡಿಯೇ ಶಾಲೆ ಆರಂಭಿಸಬೇಕು. ಯಾವುದೇ ಕಾರಣಕ್ಕೂ ಶಾಲೆಗಳಲ್ಲಿ ಶಾಂತಿ ಹದಗೆಡದಂತೆ ನೋಡಿಕೊಳ್ಳಿ. ಕೆಲವು ದಿನಗಳ ಮಟ್ಟಿಗೆ ಯಾವುದೇ ವಿದ್ಯಾರ್ಥಿಗಳ ಕಾರ್ಯಕ್ರಮ ಅವಕಾಶ ಬೇಡ. ಸಾಂಸ್ಕೃತಿಕ ಕಾರ್ಯಕ್ರಮ ಬ್ರೇಕ್ ಹಾಕಿ ಕೇವಲ ತರಗತಿ ಮಾತ್ರ ಮಾಡಬೇಕು.

ಶಾಲೆಯ ಆವರಣದಲ್ಲಿ ಯಾವುದೇ ಕಾರಣಕ್ಕೂ ಕೋಮು ಸೌರ್ಹದತೆಗೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಿ. ಒಂದೊಮ್ಮೆ ಸಮವಸ್ತ್ರ ಕಿರಿಕ್ ಅಥವಾ ಗಲಾಟೆ ಎದುರಾದರೆ ತಕ್ಷಣಕ್ಕೆ ಡಿಡಿಪಿಐ ಗಮನಕ್ಕೆ ತರುವಂತೆ ಶಿಕ್ಷಣ ಇಲಾಖೆ ರಾಜ್ಯದಲ್ಲಿ ಶಾಲೆಗಳ ಆರಂಭಕ್ಕೆ ಕೆಲವು ಸೂಚನೆ ನೀಡಿದೆ. ಇಂದು 2.30ಕ್ಕೆ ಕೋರ್ಟ್​ನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ವಿಚಾರಣೆ ನಡೆಯಲಿದೆ. ಕೋರ್ಟ್ ತೀರ್ಪಿಗಾಗಿ ಇಡೀ ರಾಜ್ಯ ಕಾದು ಕುಳಿತಿದೆ.

- Advertisement -

Related news

error: Content is protected !!