Thursday, May 16, 2024
spot_imgspot_img
spot_imgspot_img

ಹಿರಿಯಡ್ಕ: ಸಬ್‌ ಜೈಲಿನಲ್ಲಿ ವಿಚಾರಣಾಧೀನ ಕೈದಿ ಆತ್ಮಹತ್ಯೆ

- Advertisement -G L Acharya panikkar
- Advertisement -
vtv vitla

ಹಿರಿಯಡ್ಕ: ವಿಚಾರಣಾಧೀನ ಕೈದಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿರಿಯಡ್ಕ ಸಮೀಪದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.

ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಸೇರಿಗಾರ್ ಆತ್ಮಹತ್ಯೆ ಮಾಡಿಕೊಂಡ ಕೈದಿ. ಇತರೆ ಮೂವರೊಂದಿಗೆ ಸೇರಿಕೊಂಡು ಈತನು ಕಾರ್ಕಳದ ಆನಂದ ದೇವಾಡಿಗ ಎಂಬಾತನನ್ನು ಬೈಂದೂರು ಬಲೂಕಿನ ಒತ್ತಿನೆಣೆ ಹೇನ್ ಬೇರು ಬಳಿ ಪ್ರದೇಶದಲ್ಲಿ ಕಾರಿನಲ್ಲಿ ಸಜೀವವಾಗಿ ಸುಟ್ಟು ಹತ್ಯೆಗೈದಿದ್ದರು. ಪ್ರಕರಣವೊಂದರಲ್ಲಿ ತಪ್ಪಿಸಿಕೊಳ್ಳುವ ಉದ್ದೇಶದಿಂದ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಈತ ಸುಟ್ಟ ಕಾರಿನಲ್ಲಿ ತಾನೇ ಸತ್ತಿರುವುದಾಗಿ ಬಿಂಬಿಸಲು ಹೊರಟು ಬಂಧಿಯಾಗಿದ್ದ. ಅದರೆ ಆ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದ ಸದಾನಂದ ಸೇರಿಗಾರ್ ಹಾಗೂ ಆತನ ಗೆಳತಿ ಶಿಲ್ಪ ಸಾಲಿಯಾನ್, ಸತೀಶ್‌ ದೇವಾಡಿಗ, ನಿತೀಶ್‌ ದೇವಾಡಿಗ ಜೈಲು ಪಾಲಾಗಿದ್ದರು.

ಜೈಲು ಸೇರಿದ ಬಳಿಕ ಸದಾನಂದ ಸೇರಿಗಾರ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ಕಾರಣದಿಂದ ಇಂದು ಮುಂಜಾನೆ 5 ಗಂಟೆಯ ಸುಮಾರಿಗೆ ಪಂಚೆಯಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಇತರ ಕೈದಿಗಳು ಆತನನ್ನು ನೇಣು ಕುಣಿಕೆಯಿಂದ ಬಿಡಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ದಾರಿ ಮಧ್ಯೆ ಸದಾನಂದ ಸೇರಿಗಾರ್‌ ಕೊನೆಯುಸಿರೆಳೆದಿದ್ದಾರೆ.

ಮೃತದೇಹವನ್ನು ಅಜ್ಜರಕಾಡು ಶವಗಾರದಲ್ಲಿ ಇರಿಸಲಾಗಿದೆ.

- Advertisement -

Related news

error: Content is protected !!