Tuesday, May 21, 2024
spot_imgspot_img
spot_imgspot_img

ಹೆಚ್ಚಿತ್ತಿರುವ ಬ್ಯಾಂಕಿಂಗ್ ವಂಚನೆ; ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ RBI

- Advertisement -G L Acharya panikkar
- Advertisement -
driving

ಮುಂಬಯಿ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬ್ಯಾಂಕಿಂಗ್ ವಂಚನೆಗಳನ್ನು ಗಮನದಲ್ಲಿರಿಸಿ “ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ” ಅಥವಾ ಕೆವೈಸಿ ವಿವರಗಳನ್ನು ನವೀಕರಿಸುವ ನೆಪದಲ್ಲಿ ನಡೆಯುತ್ತಿರುವ ವಂಚನೆಗಳ ವಿರುದ್ಧ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ. ಅಪರಿಚಿತ ವ್ಯಕ್ತಿಗಳೊಂದಿಗೆ ಯಾವುದೇ ವಯಕ್ತಿಕ ಅಥವಾ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳದಂತೆ ನಿಯಂತ್ರಕರು (ಆರ್​ಬಿಐ) ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಆರ್‌ಬಿಐ ಹಲವಾರು ದೂರುಗಳನ್ನು ಸ್ವೀಕರಿಸಿದ ನಂತರ ಮತ್ತು ಕೆವೈಸಿ ನವೀಕರಣದ ಹೆಸರಿನಲ್ಲಿ ವಂಚನೆಗಳಿಗೆ ಗ್ರಾಹಕರು ಬಲಿ ಆಗುತ್ತಿರುವ ವರದಿಗಳಾಗುತ್ತಿರುವ ನಂತರ ಹೊಸ ಎಚ್ಚರಿಕೆ ನೀಡಿದೆ.

ಅಕೌಂಟ್ ಲಾಗಿನ್ ವಿವರಗಳು, ವೈಯಕ್ತಿಕ ಮಾಹಿತಿ, ಕೆವೈಸಿ ದಾಖಲೆಗಳ ಪ್ರತಿಗಳು, ಕಾರ್ಡ್ ಮಾಹಿತಿ, ಪಿನ್, ಪಾಸ್ವರ್ಡ್, ಒಟಿಪಿ ಇತ್ಯಾದಿಗಳನ್ನು ಗುರುತಿಸಲಾಗದ ವ್ಯಕ್ತಿಗಳು ಅಥವಾ ಏಜೆನ್ಸಿಗಳೊಂದಿಗೆ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಈ ಮೂಲಕ ಎಚ್ಚರಿಕೆ ನೀಡಲಾಗಿದೆ. ಮುಂದೆ, ಅಂತಹ ವಿವರಗಳನ್ನು ಪರಿಶೀಲಿಸದ/ಅನಧಿಕೃತ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳ ಮೂಲಕ ಹಂಚಿಕೊಳ್ಳಬಾರದು ಎಂದು ಆರ್‌ಬಿಐ ಹೇಳಿದೆ.

ಸಂವಹನಗಳಲ್ಲಿ ಖಾತೆಯ ಸ್ಥಗಿತ ಅಥವಾ ನಿರ್ಬಂಧ/ಮುಚ್ಚುವಿಕೆ ಬೆದರಿಕೆ ಹಾಕಲಾಗುತ್ತವೆ ಎಂದು ವರದಿಯಾಗಿದೆ ಎಂಬುದಾಗಿ ಆರ್‌ಬಿಐ ಹೇಳಿದೆ. “ಒಮ್ಮೆ ಗ್ರಾಹಕರು ಕರೆ/ಸಂದೇಶ/ಅನಧಿಕೃತ ಅಪ್ಲಿಕೇಷನ್ ಮೂಲಕ ಮಾಹಿತಿಯನ್ನು ಹಂಚಿಕೊಂಡರೆ, ವಂಚಕರು ಗ್ರಾಹಕರ ಖಾತೆಗೆ ಸಂಪರ್ಕ ಪಡೆದು ವಂಚಿಸುತ್ತಾರೆ,” ಎನ್ನಲಾಗಿದೆ.

ಕೆವೈಸಿ ಅಪ್‌ಡೇಟ್ ಬಾಕಿ ಇರುವ ಖಾತೆಗಳ ಕಾರ್ಯಾಚರಣೆಗೆ ಯಾವುದೇ ನಿರ್ಬಂಧಗಳನ್ನು ಡಿಸೆಂಬರ್ 31, 2021ರ ವರೆಗೆ ವಿಧಿಸಬಾರದು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ಸಲಹೆ ನೀಡಿದೆ.

- Advertisement -

Related news

error: Content is protected !!