Friday, May 3, 2024
spot_imgspot_img
spot_imgspot_img

ಹೈವೋಲ್ಟೇಜ್ ವಿದ್ಯುತ್ ತಂತಿ ಬಿದ್ದು 30 ಮಂದಿ ದುರ್ಮರಣ

- Advertisement -G L Acharya panikkar
- Advertisement -
vtv vitla
vtv vitla

ಯಾವಾಗ ಬೇಕಾದರೂ ಅಪಘಾತಗಳು ಸಂಭವಿಸುತ್ತವೆ. ಕೆಲವು ಅಪಘಾತಗಳು ಎಷ್ಟು ಭೀಕರವಾಗಿರುತ್ತವೆ ಎಂದರೆ ಅವುಗಳನ್ನು ನೋಡಿದರೆ ಕೈಕಾಲುಗಳು ನಡುಗಲಾರಂಭಿಸುತ್ತವೆ. ಅಂತಹದೊಂದು ಅವಘಡದ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವೀಡಿಯೊ ಕಾಂಗೋ ಗಣರಾಜ್ಯದ್ದು, ಅಲ್ಲಿನ ಕಿಬ್ಲಾ ಪ್ರದೇಶದ ಮಾರುಕಟ್ಟೆಯಲ್ಲಿ ಹೈವೋಲ್ಟೇಜ್ ವಿದ್ಯುತ್ ತಂತಿ ಜನರ ಮೇಲೆ ಬಿದ್ದಿದೆ. ಈ ತಂತಿಯಿಂದ 30 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

vtv vitla
vtv vitla

ಮೊದಲೇ ಅಸ್ವಚ್ಛತೆಯಿಂದ ಕೂಡಿದ್ದ ಮಾರುಕಟ್ಟೆಯ ದಾರಿಯುದ್ದಕ್ಕೂ ಕೆಸರು ತುಂಬಿತ್ತು. ಇದರಿಂದ ಅಲ್ಲಿ ವಿದ್ಯುತ್ ಕಂಬಗಳು ಕೂಡ ಸಡಿಲಗೊಂಡಿದ್ದವು. ಎಂದಿನಂತೆ ಬೆಳಿಗ್ಗಿನ ಜಾವ ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಜನಜಂಗುಳಿ ಸೇರಿಸಿತ್ತು. ಇದೇ ವೇಳೆ ಹೈವೋಲ್ಟೇಜ್ ತಂತಿ ಬಿದ್ದಿದೆ. ಮೊದಲೇ ಕೆಸರಿನಿಂದ ತುಂಬಿದ್ದರಿಂದ ನೀರಿನ ಸೆಳೆತಕ್ಕೆ ಇಡೀ ಪ್ರದೇಶಕ್ಕೆ ಹೈವೋಲ್ಟೇಜ್ ವಿದ್ಯುತ್ ಪಸರಿಸಿದೆ. ಇದರಿಂದ ಕ್ಷಣಾರ್ಧದಲ್ಲೇ ವಿದ್ಯುತ್ ಶಾಕ್ ತಗುಲಿ ಮಾರುಕಟ್ಟೆಯಲ್ಲಿ ಮೃತದೇಹಗಳು ರಾಶಿ ಬಿದ್ದವು.

ಇದೀಗ ಈ ಕಿಬ್ಲಾ ಮಾರುಕಟ್ಟೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಕಾಣುವಂತೆ ಎಲ್ಲಾ ಮೃತದೇಹಗಳು ಒಂದಕ್ಕೊಂದು ಅಂಟಿಕೊಂಡಿವೆ. ಈ ಪೈಕಿ ಬಹುತೇಕ ಮೃತ ದೇಹಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದೆ. ತಂತಿ ನೇರವಾಗಿ ಕೆಸರಿನಿಂದ ಕೂಡಿದ ನೀರಿಗೆ ಬಿದ್ದಿದೆ. ನೀರಿನ ಸಂಪರ್ಕಕ್ಕೆ ಬಂದವರಿಗೆ ಬಲವಾದ ವಿದ್ಯುತ್ ಶಾಕ್ ತಗುಲಿದೆ. ಈ ಪೈಕಿ 30 ಮಂದಿ ಸಾವನ್ನಪ್ಪಿದ್ದಾರೆ. ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

vtv vitla
- Advertisement -

Related news

error: Content is protected !!