Friday, July 11, 2025
spot_imgspot_img
spot_imgspot_img

ಹೊಟ್ಟೆಪಾಡಿಗಾಗಿ ಮೈ ಮಾರುತ್ತಿದ್ದಾಕೆಗೆ ಚಲನಚಿತ್ರ ಪ್ರಶಸ್ತಿ

- Advertisement -
- Advertisement -

ತಿರುವನಂತಪುರಂ: ಆಕೆ ಹೊಟ್ಟೆಪಾಡಿಗಾಗಿ ಲೈಂಗಿಕ ಕಾರ್ಯಕರ್ತೆಯಾಗಿ ದುಡಿಯುತ್ತಿದ್ದಳು. ಅದೆಷ್ಟೋ ಬಾರಿ ಜೀವನೇ ಬೇಡ ಅನ್ನುವ ಮಟ್ಟಕ್ಕೆ ಈಕೆ ಇಳಿದಿದ್ದಳು. ಆದ್ರೆ ಬದುಕು ಕಟ್ಟಿಕೊಳ್ಳುವ ಆಸೆ ಗೋಪುರದಷ್ಟಿದ್ದು..! ಸಿನೆಮಾ ಒಂದರಲ್ಲಿ ವಸ್ತ್ರವಿನ್ಯಾಸಕಿಯಾಗಿದ್ದ ಮಹಿಳೆಯನ್ನು ಕೇರಳ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಇವರು ಹೆಸರು ನಳಿನಿ ಜಮೀಲ. 69 ವರ್ಷದ ನಳಿನಿ ಅವರು ತಮ್ಮ ಯೌವನದಲ್ಲಿ ಹೊಟ್ಟೆಪಾಡಿಗಾಗಿ ಲೈಂಗಿಕ ಕಾರ್ಯಕರ್ತೆಯಾಗಿದ್ದ ಸಂದರ್ಭದಲ್ಲಿ ತಾವು ಎದುರಿಸಿದ್ದ ನೋವು ನಲಿವುಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದು ಮನೆ ಮಾತಾಗಿದ್ದರು.

ಮಣಿಲಾಲ್ ನಿರ್ದೇಶನದ ಭರತ್‌ಪುಳ ಚಿತ್ರದಲ್ಲಿ ವಸ್ತ್ರವಿನ್ಯಾಸಕಿಯಾಗಿದ್ದ ನಳಿನಿ ಅವರನ್ನು ಕೇರಳ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಲೈಂಗಿಕ ಕಾರ್ಯಕರ್ತೆಯಾಗಿ ನಾನು ಅನುಭವಿಸಿದ ನೋವು ಅಷ್ಟಿಷ್ಟಲ್ಲ. ಇದರ ಮಧ್ಯೆ ನನಗೆ ಚಲನಚಿತ್ರ ಪ್ರಶಸ್ತಿ ಬರಲಿದೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಇದು ನನ್ನ ಜೀವಮಾನದ ಸಾಧನೆ ಎಂದು ಹೆಮ್ಮೆಪಟ್ಟಿದ್ದಾರೆ ನಳಿನಿ.

- Advertisement -

Related news

error: Content is protected !!