Saturday, July 5, 2025
spot_imgspot_img
spot_imgspot_img

ಹೊಳೇಬೀದಿ ಮಸೀದಿ ಧ್ವಂಸ ಪ್ರಕರಣದ 28 ಆರೋಪಿಗಳು ಖುಲಾಸೆ

- Advertisement -
- Advertisement -

ಮಂಡ್ಯ:15 ವರ್ಷಗಳ ಹಿಂದೆ ಮದ್ದೂರು ಹೊಳೇ ಬೀದಿ ಮಸೀದಿಗೆ ನುಗ್ಗಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ 28 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ ಜೆಎಂಎಫ್‌ ಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದಲ್ಲಿ ಆರೋಪಿಗಳಾಗಿದ್ದ ಆಟೋ ಸಿದ್ದಪ್ಪಾಜಿ, ಪಂಚಮಿ ಗುರುಸ್ವಾಮಿ, ಮೃತ್ಯಂಜಯ, ನೈದಿಲೆ ಚಂದ್ರುಗಿ, ಎಂ.ಎಸ್. ಜಗನ್ನಾಥ್, ಪಿ.ಹುಚ್ಚಪ್ಪ ಹಾಗೂ ಎಂ.ಎಸ್. ವೀರಭದ್ರಸ್ವಾಮಿ ಸೇರಿದಂತೆ 28 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆದಿತ್ಯಾ ಆರ್. ಕಲಾಲ್ ತೀರ್ಪು ನೀಡಿದ್ದಾರೆ.

2007ರ 11ರಂದು ಪಟ್ಟಣದಲ್ಲಿ ನಡೆದಿದ್ದ ವಿರಾಟ್ ಹಿಂದೂ ಸಮಾವೇಶದಲ್ಲಿ ಭಗವಾಧ್ವಜವನ್ನು ಹಾರಿಸಲಾಗಿತ್ತು. ಹಳೇ ವಿಜಯಾಬ್ಯಾಂಕ್‌ನ ಹೂವಿನ ಸರ್ಕಲ್‌ನಲ್ಲಿ ಹಾರಿಸಲಾಗಿದ್ದ ಭಗವಾಧ್ವಜ ಧ್ವಂಸ ಮಾಡಲಾಗಿದೆ ಎಂದು ಆರೋಪಿಸಿ ದುಷ್ಕರ್ಮಿಗಳು ಹೊಳೇ ಬೀದಿಯಲ್ಲಿದ್ದ ಮಸೀದಿಗೆ ನುಗ್ಗಿ ದಾಂಧಲೆ ನಡೆಸಿ ಧರ್ಮ ಧ್ವಜ ಹಾಗೂ ದರ್ಗಾಗೆ ಹೊದಿಸಲಾಗಿದ್ದ ಚಾದರ್‌ನ್ನು ಸುಟ್ಟುಹಾಕಿದ್ದರು.

- Advertisement -

Related news

error: Content is protected !!