Friday, March 29, 2024
spot_imgspot_img
spot_imgspot_img

1 ತಲೆ, 8 ಕಾಲು, 2 ದೇಹದ ವಿಚಿತ್ರ ಕರು ಜನನ

- Advertisement -G L Acharya panikkar
- Advertisement -

ಪ್ರಕೃತಿಯ ಸೃಷ್ಟಿಯೇ ಸೋಜಿಗ. ಈ ಹಿಂದೆ ನಾವು ಐದು ಕಾಲು, ಎರಡು ಮೂಗು ಉಳ್ಳ ಕರುಗಳ ಜನನ ಕೇಳಿದ್ದೇವೆ ನೋಡಿದ್ದೇವೆ. ಈಗ ಇನ್ನೂ ವಿಶೇಷ ಎಂಬಂತೆ ವಿಚಿತ್ರ ಕರುವೊಂದರ ಜನನವಾಗಿದೆ. 1 ತಲೆ, 8 ಕಾಲು, 2 ದೇಹವನ್ನು ಈ ವಿಚಿತ್ರ ಕರು ಹೊಂದಿದೆ.

ಈ ವಿಸ್ಮಯಕ್ಕೆ ಸಾಕ್ಷಿಯಾಗಿದ್ದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೇದಿಗೆರೆ ಗ್ರಾಮ. ವಿಶೇಷವೆಂದರೆ, ಒಂದು ದೇಹಕ್ಕೆ ತಲೆಯೇ ಇಲ್ಲ, ಒಂದು ದೇಹ ಮತ್ತೊಂದು ದೇಹದ ಜೊತೆ ಸೇರ್ಪಡೆಯಾಗಿದೆ. ಕಡೂರು ತಾಲೂಕಿನ ಕೇದಿಗೆರೆ ಗ್ರಾಮದ ಈಶಣ್ಣ ಎಂಬುವರ ಮನೆಯಲ್ಲಿ ಈ ಕರು ಹುಟ್ಟಿದೆ.

30 ಕುರಿಗಳನ್ನ ಸಾಕಿಕೊಂಡು ಬದುಕುತ್ತಿದ್ದ ಈಶಣ್ಣ ಮನೆಗೆ ಈ ವಿಚಿತ್ರ ಕರು ನೋಡಲು ಅಕ್ಕಪಕ್ಕದ ಹಳ್ಳಿಗಳಿಂದೆಲ್ಲಾ ಬಂದು ಹೋಗುತ್ತಿದ್ದಾರೆ. ಹುಟ್ಟಿದ ಒಂದೇ ಗಂಟೆಯಲ್ಲಿ ಕರು ಸತ್ತು ಹೋಗಿದೆ.

- Advertisement -

Related news

error: Content is protected !!