Tuesday, July 1, 2025
spot_imgspot_img
spot_imgspot_img

11 ಬಾರಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದ ವೃದ್ಧನ ವಿರುದ್ಧ ಎಫ್‌ಐಆರ್‌ ದಾಖಲು

- Advertisement -
- Advertisement -
suvarna gold

ಪಟ್ನಾ: 11 ಬಾರಿ ಕೊರೊನಾ ಲಸಿಕೆ ಹಾಕಿಸಿಕೊಂಡ ವೃದ್ಧನ ವಿರುದ್ಧ ಬಿಹಾರದ ಮಾದೇಪುರದಲ್ಲಿ ಭಾನುವಾರ ಎಫ್‌ಐಆರ್‌ ದಾಖಲಾಗಿದೆ.

ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ಮಾಹಿತಿ ನೀಡಿದ್ದು, “11 ಬಾರಿ ಕೊರೊನಾ ಲಸಿಕೆ ಹಾಕಿಸಿಕೊಂಡ ವೃದ್ಧನ ವಿರುದ್ಧ ಮಾದೇಪುರದ ಪುರೈನಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಅನ್ನು ದಾಖಲಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.

vtv vitla
vtv vitla

ಮಾದೇಪುರ ಜಿಲ್ಲೆಯ ಉರೈ ಗ್ರಾಮದ ನಿವಾಸಿ 84 ವರ್ಷದ ಬ್ರಹ್ಮದೇವ್ ಮಂಡಲ್ ಎಂಬುವವರು 11 ಬಾರಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದು, 12ನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳಲು ತೆರಳಿದಾಗ ಆರೋಗ್ಯ ಸಿಬ್ಬಂದಿ ಅವರನ್ನು ಗುರುತಿಸಿದ್ದರು ಎನ್ನಲಾಗಿದೆ.

ಇನ್ನು ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಬ್ರಹ್ಮದೇವ್ ಮಂಡಲ್, ಲಸಿಕೆ ಹಾಕಿಸಿಕೊಳ್ಳಲು ಎಂಟು ಬಾರಿ ಆಧಾರ್ ಕಾರ್ಡ್, ಮೂರು ಬಾರಿ ವೋಟರ್ ಐಡಿ ಬಳಸಿದ್ದರು ಎಂದು ತಿಳಿದುಬಂದಿದೆ.

vtv vitla
vtv vitla
- Advertisement -

Related news

error: Content is protected !!