Thursday, June 11, 2026
spot_imgspot_img
spot_imgspot_img

“11 ವರ್ಷಗಳ ಪ್ರೀತಿಯ ನಂಟು” ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ ರಾಜ್ ಕುಮಾರ್ ರಾವ್.!

- Advertisement -
- Advertisement -

ಬಾಲಿವುಡ್ ನಟ ರಾಜ್‍ಕುಮಾರ್ ರಾವ್ ಬಹುಕಾಲದ ಗೆಳತಿ ಪತ್ರಲೇಖಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಸಮಾರಂಭದ ಫೋಟೋಗಳನ್ನು ರಾಜ್‍ಕುಮಾರ್ ರಾವ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹಲವಾರು ಸೆಲಿಬ್ರೆಟಿಗಳು, ಸ್ನೇಹಿತರು ಮತ್ತು ಅಭಿಮಾನಿಗಳು ಈ ನವಜೋಡಿಗೆ ವಿಶ್ ಮಾಡಿದ್ದಾರೆ.

ನಟ ರಾಜ್‍ಕುಮಾರ್ ರಾವ್ ಪತ್ರಲೇಖಾ ಜೊತೆ ಚಂಡೀಗಢದಲ್ಲಿ ನವೆಂಬರ್ 15 ರಂದು ಸಪ್ತಪದಿ ತುಳಿದರು. ಸದ್ಯ ಮದುವೆ ಸಮಾರಂಭದ ಫೋಟೋಗಳನ್ನು ರಾಜ್‍ಕುಮಾರ್ ರಾವ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ರಾಜ್‍ಕುಮಾರ್ ಸಂಪ್ರದಾಯಿಕ ಉಡುಗೆ ಧರಿಸಿದ್ದರೆ, ಪತ್ರಲೇಖಾ ಕೆಂಪು ಬಣ್ಣದ ಲೆಹೆಂಗಾ ತೊಟ್ಟು ಮಿಂಚುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಈ ಫೋಟೋ ಜೊತೆಗೆ ’11 ವರ್ಷಗಳ ಪ್ರೀತಿ, ಪ್ರಣಯ, ಸ್ನೇಹ ಮತ್ತು ಮೋಜಿನ ನಂತರ ಅಂತಿಮವಾಗಿ ನಾನು ಇಂದು ನನ್ನ ಎಲ್ಲವೂ ಆಗಿದ್ದವರನ್ನು ಮದುವೆಯಾಗಿದ್ದೇನೆ. ನನ್ನ ಆತ್ಮ ಸಂಗಾತಿ, ನನ್ನ ಆತ್ಮೀಯ ಸ್ನೇಹಿತೆ, ನನ್ನ ಕುಟುಂಬ. ಇಂದು ಪತ್ರಲೇಖ ಪತಿ ಎಂದು ಕರೆಸಿಕೊಳ್ಳುತ್ತಿರುವುದಕ್ಕಿಂತ ಹೆಚ್ಚಾಗಿ ನನಗೆ ಮತ್ತೊಂದು ಖುಷಿ ಇಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದು ಹಾಕಿದ್ದಾರೆ.

ಇದೇ ರೀತಿ ಪತ್ರಲೇಖ ಅವರು ಕೂಡ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ನನಗೆ ಎಲ್ಲವೂ ಆಗಿದ್ದವರನ್ನು ನಾನು ಇಂದು ಮದುವೆಯಾಗಿದ್ದೇನೆ. ನನ್ನ ಗೆಳೆಯ, ನನ್ನ ಕ್ರೈಂ ಪಾರ್ಟ್‍ನರ್, ಕಳೆದ 11 ವರ್ಷಗಳ ಉತ್ತಮ ಸ್ನೇಹಿತ. ನಿಮ್ಮ ಹೆಂಡತಿಯಾಗಿರುವುದಕ್ಕಿಂತ ದೊಡ್ಡದೇನಿಲ್ಲ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಈ ನವಜೋಡಿಯ ಫೋಟೋಗಳಿಗೆ ನಟಿ ಪ್ರಿಯಾಂಕಾ ಚೋಪ್ರಾ, ಅನಿಲ್ ಕಪೂರ್, ದಿಯಾ ಮಿರ್ಜಾ, ಸಾನಿಯಾ ಮಲ್ಹೋತ್ರಾ, ಆಯುಷ್ಮಾನ್ ಕುರಾನಾ, ತಾಪ್ಸಿ ಪನ್ನು, ಭೂಮಿ ಪಡಿಕರ್, ಸೋನಾಲಿ ಬೇಂದ್ರೆ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರೆಟಿಗಳು ಇವರಿಗೆ ಶುಭಾಶಯ ತಿಳಿಸಿದ್ದಾರೆ.

- Advertisement -

Related news

error: Content is protected !!