Wednesday, July 22, 2026
spot_imgspot_img
spot_imgspot_img

ಬೆಂಗಳೂರು: ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಝೀ ಕನ್ನಡದ ಸರಿಗಮಪ ಲಿಟಿಲ್ ಚಾಂಪ್ಸ್ 2026 ರಿಯಾಲಿಟಿ ಶೋ ಗೆ ಮಂಗಳೂರಿನ ಅಶ್ಮಿತ್ ಎ ಜೆ ಆಯ್ಕೆ

- Advertisement -
- Advertisement -

ಬೆಂಗಳೂರು: ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುವ ಸರಿಗಮಪ ಲಿಟಿಲ್ ಚಾಂಪ್ಸ್ 2026 ರಿಯಾಲಿಟಿ ಶೋ ಗೆ ಮಂಗಳೂರಿನ ಅಶ್ಮಿತ್ ಎ ಜೆ ಆಯ್ಕೆಯಾಗಿದ್ದಾರೆ. ಮಂಗಳೂರಿನ ನ್ಯಾಯವಾದಿ ಜಯರಾಮ್ ಮತ್ತು ಆಶಾ ದಂಪತಿಗಳ ಸುಪುತ್ರ ಅಶ್ಮಿತ್ ಮಂಗಳೂರಿನ ಸಂತ ಅಲೋಶಿಯಸ್ ಗೊಂಝುಗಾ ಶಾಲೆಯ ವಿದ್ಯಾರ್ಥಿಯಾಗಿದ್ದಾರೆ. ತನ್ನ ಅಪ್ರತಿಮ ಪ್ರತಿಭೆಯಿಂದ ಹಲವಾರು ವೇದಿಕೆಯಲ್ಲಿ ತನ್ನ ಸ್ವರ ಮಧುರ್ಯವನ್ನು ಪ್ರದರ್ಶನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನ ಪ್ರಶಸ್ತಿಗಳನ್ನು ಮುಡಿಗಗೇರಿಸಿಕೊಂಡಿದ್ದಾರೆ.

ಸಂಧ್ಯಾ ನಾರಾಯಣ ಇವರಿಂದ ಶಾಸ್ತ್ರೀಯ ಸಂಗೀತವನ್ನು ಕಲಿಯುತ್ತಿರುವ ಅಶ್ಮಿತ್ ನ ಸಂಗೀತ ಸಾಧನೆಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಒಲಿದು ಬಂದಿದೆ. ಇದೀಗ ಕರ್ನಾಟಕದ ಅತೀ ದೊಡ್ಡ ರಿಯಾಲಿಟಿ ಶೋ ಝೀ ಕನ್ನಡದ ಸರಿಗಮಪ ಶೋ ಗೆ ಆಯ್ಕೆಯಾಗಿದ್ದು, ಗಾಯನದ ಜೊತೆಗೆ ವಯಲಿನ್ ನುಡಿಸಿ ತೀರ್ಪುಗಾರರಾದ ಕರ್ನಾಟಕದ ಹೆಸರಾಂತ ಗಾಯಕರಾದ ವಿಜಯ್ ಪ್ರಕಾಶ್, ಅರ್ಜುನ್ ಜನ್ಯ ಹಾಗೂ ರಾಜೇಶ್ ಕೃಷ್ಣನ್ ರವರಿಂದ ಮೆಚ್ಚುಗೆ ಪಡೆದು ಮುಂದಿನ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

- Advertisement -

Related news

error: Content is protected !!