- Advertisement -
- Advertisement -


2 ತಿಂಗಳ ಹಸುಗೂಸನ್ನು ಕೋತಿಗಳು ಹೊತ್ತೊಯ್ದು ನೀರಿನ ಟ್ಯಾಂಕ್’ಗೆ ಹಾಕಿದ ಘಟನೆ ಉತ್ತರಪ್ರದೇಶದ ಬಾಗ್ವತ್ ಎಂಬಲ್ಲಿ ನಡೆದಿದೆ.

ಅಜ್ಜಿಯೊಂದಿಗೆ ಟೆರೇಸ್ನ ರೂಮ್ನಲ್ಲಿ ಮಗು ಮಲಗಿತ್ತು. ರೂಮ್ನ ಬಾಗಿಲು ತೆರೆದೇ ಇತ್ತು. ಆಗ ಅಲ್ಲಿಗೆ ಬಂದ ಕೋತಿಗಳ ಹಿಂಡು ಮಗುವನ್ನು ಎಳೆದುಕೊಂಡು ಹೋಗಿವೆ. ಸ್ವಲ್ಪ ಸಮಯದ ಬಳಿಕ ಅಜ್ಜಿ ಎಚ್ಚರವಾಗಿ ನೋಡಿದಾಗ ಮಗು ಕಾಣಿಸದೆ ಇರುವುದರಿಂದ ಗಾಬರಿಯಾಗಿದ್ದಾರೆ. ಕುಟುಂಬಸ್ಥರು ಮಗುವನ್ನು ಹುಡುಕಿದ್ದಾರೆ. ಮಗು ಮೃತ ದೇಹ ನೀರಿನ ಟ್ಯಾಂಕ್ನಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಘಟನೆಯಲ್ಲಿ ಮಗು ಸಾವನಪ್ಪಿದೆ ಎಂದು ತಿಳಿದುಬಂದಿದೆ.


- Advertisement -








