Saturday, June 28, 2025
spot_imgspot_img
spot_imgspot_img

ತುರೈಪ್ ವಿಂಟರ್ ಬ್ಯಾಸ್ – 2020 ಕ್ರಿಕೆಟ್ ಪಂದ್ಯಾಟ 22, 23 ಅಕ್ಟೋಬರ್

- Advertisement -
- Advertisement -

ಸೌದಿ ಅರೇಬಿಯಾ : ತುರೈಪ್ ಚಳಿಗಾಲದ ನಿಯಮಿತ ಓವರ್ ಗಳ ಕ್ರಿಕೆಟ್ ಪಂದ್ಯಾಟ 22, 23 ಅಕ್ಟೋಬರ್ 2020 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದ್ದು ಇದರ ಭಾಗವಾಗಿ ಉದ್ಘಾಟನಾ ಸಮಾರಂಭ ಮಂಗಳವಾರ ತುರೈಪ್ ನ ಗೋಲ್ಡನ್ ಡ್ಯೂನ್ ಹೋಟೆಲ್ ಸಭಾಂಗಣದಲ್ಲಿ ನಡೆಯಿತು, ಜೀಯಿ (GE) ವಾರಿಯರ್ಸ್ ತಂಡ ಈ ಪಂದ್ಯಾಟವನ್ನು ಏರ್ಪಡಿಸಿದ್ದು ಸಮಾರಂಭದ ಉದ್ಘಾಟನೆಯನ್ನು ಜೀಯಿ ಕಮಿಷನಿಂಗ್ ಮ್ಯಾನೇಜರ್ ಕಲಮ್ ಕಾರ್ನ್ ಪೋರ್ರ್ತ್ ನಡೆಸಿದರು, ಪೈಸಲ್ ಮತ್ತು ಶಹೀರ್ ಬೋಂದೆಲ್ ಉಪಸ್ಥಿತರಿದ್ದರು, ಆಟವು ಕೆಲಸದ ಒತ್ತಡದಿಂದ ಮನೋರಂಜನೆ ರೂಪದಲ್ಲಿ ಮತ್ತಷ್ಟು ಉತ್ಸಾಗೊಳ್ಳಲು ಸಹಕರಿಸುತ್ತದೆ ಎಂದು ಪೈಸಲ್ ತಿಳಿಸಿದರು.

ಪಂದ್ಯಾಟದ ಪ್ರಾಯೋಜಕರಾಗಿ ಗೋಲ್ಡನ್ ಡ್ಯೂನ್ & ಝೈದ್ ಹೋಟೆಲ್, ಮೆಕ್ ವೆಲ್, ಸುಮೋ ಸೌದಿ ಅರೇಬಿಯಾ, ಟ್ರಾನ್ಸೆಂಟ್ ಅರೇಬಿಯಾ ಕಾಂಟ್ರಾಕ್ ಕಂಪೆನಿಗಳು ಸಹಕರಿಸಿದೆ.

ಮಂಗಳೂರು ಮೂಲದ ಶಿಹಾಬ್ ಜಾರಿಗೆಬೈಲು, ಅಪ್ಜಲ್ ಗಂಟಲ್ಕಟ್ಟೆ, ನೌಪಾಲ್ ಕಾಪು ಕ್ರಿಕೆಟ್ ಪಂದ್ಯಾಟದ ಆಯೋಜನೆ ನಡೆಸಿರುತ್ತಾರೆ, 6 ತಂಡಗಳು ಈ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸಲಿದೆ, ಕೆಲಸದ ಒತ್ತಡದ ನಡುವೆ ಪ್ರವಾಸಿಗರಿಗೆ ಮನೋರಂಜನೆಯ ಸಲುವಾಗಿ ಈ ಕ್ರಿಕೆಟ್ ಪಂದ್ಯಾಟವನ್ನು ಏರ್ಪಡಿಸಲಾಗಿದೆ. ವಿಜೇತರಿಗೆ ಕಪ್ ಮತ್ತು ಪದಕಗಳನ್ನು ನೀಡಲಾಗುವುದು, ವಿವಿಧ ದೇಶ ಮತ್ತು ಭಾರತದ ವಿವಿಧ ರಾಜ್ಯಗಳ ಪ್ರವಾಸಿಗರು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!