- Advertisement -
- Advertisement -
ಭಾರತದಲ್ಲಿ 2026ರ ವೇಳೆಗೆ 5ಜಿ ಬಳಕೆದಾರರ ಸಂಖ್ಯೆ 30.3 ಕೋಟಿ ಇರಲಿದ್ದು, ಪ್ರತಿ ಬಳಕೆದಾರನ ಮಾಸಿಕ ಡೇಟಾ ಬಳಕೆಯ ಪ್ರಮಾಣ 40 ಜಿಬಿ ಮೀರಲಿದೆ ಅಂತ ಎರಿಕ್ಸನ್ ಮೊಬಿಲಿಟಿ ವರದಿಯಲ್ಲಿ ತಿಳಿಸಲಾಗಿದೆ.

2020 ರಲ್ಲಿ ಭಾರತದಲ್ಲಿ 60.8 ಕೋಟಿ 4ಜಿ ಬಳಕೆದಾರರು ಇದ್ದಾರೆ. ಇವರ ಪ್ರಮಾಣ 2026ರ ವೇಳೆಗೆ 80.3 ಕೋಟಿ ಆಗಲಿದೆ ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.

ಇನ್ನು ಕೊರೊನಾ ಕಾರಣದಿಂದಾಗಿ ಹಲವಾರು ಸಂಸ್ಥೆಗಳು ವರ್ಕ್ ಫ್ರಂ ಹೋಂನ ಮೊರೆ ಹೋಗಿವೆ. ಹಾಗಾಗಿ ಭಾರತದಲ್ಲಿ ಡೇಟಾ ಬಳಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಅಂತ ತಿಳಿಸಲಾಗಿದೆ.


- Advertisement -