- Advertisement -
- Advertisement -



ಭತ್ತದ ಹೊಲದಲ್ಲಿ ಇಲಿಗಳ ನಿಯಂತ್ರಣಕ್ಕೆ ಇಟ್ಟಿದ್ದ ವಿಷಾಹಾರವನ್ನು ಸೇವಿಸಿ ಸುಮಾರು 21 ನವಿಲುಗಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪ್ಪತ್ತೂರು ಎಂಬಲ್ಲಿ ನಡೆದಿದೆ. ಕುರುಂಪಟ್ಟಿ ಪ್ರದೇಶಕ್ಕೆ ಸೇರಿದ 71 ವರ್ಷದ ರೈತ ಷಣ್ಮುಗಂ ಎಂಬಾತ ಬಂಧಿತ ಆರೋಪಿ.


ಈ ರೈತ ತಾನು ಗುತ್ತಿಗೆ ಪಡೆದ ಜಮೀನಿನಲ್ಲಿ ಭತ್ತವನ್ನ ಬೆಳೆಯುತ್ತಿದ್ದ. ಇಲಿಗಳು ಭತ್ತದ ಹೊಲದಲ್ಲಿ ಹಾನಿ ಮಾಡುತ್ತಿದ್ದ ಕಾರಣದಿಂದ ಆಹಾರದಲ್ಲಿ ವಿಷ ಬೆರೆಸಿ ಹೊಲದಲ್ಲಿ ತಂದಿಟ್ಟಿದ್ದ. ಈ ವಿಷವನ್ನು ಸೇವಿಸಿ 21 ನವಿಲುಗಳು ಸಾವನ್ನಪ್ಪಿವೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಅಲ್ಲಿಗೆ ಆಗಮಿಸಿ ನವಿಲುಗಳ ಕಳೆಬರಗಳನ್ನು ಹೊರತೆಗೆದು ರೈತ ಷಣ್ಮುಗಂನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.


- Advertisement -