Friday, September 25, 2026
spot_imgspot_img
spot_imgspot_img

SIR ಪ್ರಕ್ರಿಯೆ ರದ್ದು ಮಾಡಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗ ನೀಡಲಿ -ನಟ ಪ್ರಕಾಶ್ ರಾಜ್ ಒತ್ತಾಯ

- Advertisement -
- Advertisement -

ತುಮಕೂರು : ವಿಶೇಷ ಪರಿಷ್ಕರಣೆ ಹೆಸರಿನಲ್ಲಿ ಜನರಲ್ಲಿ ಗೊಂದಲ ಉಂಟು ಮಾಡಿ, ಲಕ್ಷಾಂತರ ಜನರ ಮತದಾನದ ಹಕ್ಕು ಕಸಿಯುತ್ತಿರುವ ಎಸ್.ಐ.ಆ‌ರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಹಾಗೆಯೇ ಬಹುಮತವಿಲ್ಲದಿದ್ದರೂ ಎಸ್.ಐ.ಆ‌ರ್. ಫಾರಂಗಳಲ್ಲಿ ಹಲವು ಅಂಶಗಳನ್ನು ಸೇರಿಸಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಮ್ಮ ಸ್ಥಾನಕೆ ರಾಜೀನಾಮೆ ನೀಡಬೇಕೆಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಒತ್ತಾಯಿಸಿದ್ದಾರೆ.

ನಗರದ ಜನ ಚಳುವಳಿ ಕೇಂದ್ರದಲ್ಲಿ ಎಸ್.ಐ.ಆ‌ರ್ ಪ್ರತಿರೋಧ ಹೋರಾಟ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳು ಜಂಟಿಯಾಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಶ್ಚಿಮ ಬಂಗಾಳ, ಬಿಹಾರದ ರೀತಿ ಕರ್ನಾಟಕವನ್ನು ಗೆಲ್ಲುವ ಸಲುವಾಗಿ ನಡೆಸುತ್ತಿರುವ ಈ ಎಸ್.ಐ.ಆರ್. ಪ್ರಕ್ರಿಯೆಯನ್ನು ಕೂಡಲೇ ರದ್ದು ಮಾಡಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.ಜನರ ಆಕ್ಷೇಪದ ನಡುವೆ ಯಾವ ತರಬೇತಿಯನ್ನು ನೀಡದೆ ಬಿಎಲ್‌ಓ ಗಳನ್ನು ಕಣಕ್ಕೆ ಇಳಿಸಿ, ಅವರ ಕೈಯಿಂದ ಆರ್ಜಿ ಹಂಚಿಸಿ, ಅದನ್ನು ಸರಿಯಾದ ರೀತಿಯಲ್ಲಿ ಅಪ್‌ಲೋಡ್ ಮಾಡದೆ ಕರ್ನಾಟಕದಲ್ಲಿ ಸುಮಾರು 1.08 ಕೋಟಿ ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದಾರೆ. ಮತದಾರರ ಪಟ್ಟಿಯಲ್ಲಿ ಬದುಕಿದವರನ್ನು ಬಿಟ್ಟು, ಸತ್ತವರನ್ನು ಸೇರಿಸಲಾಗಿದೆ. ಅಲ್ಲದೆ, ಮತದಾರರ ಹೆಸರಿನಲ್ಲಿರುವ ಸ್ಪೆಲಿಂಗ್‌ ಮಿಸ್ಟೇಕ್‌ಗಳಿಗೆ ಕೈಬಿಡಲಾಗಿದೆ.

ಆಯೋಗ ಮಾಡಿದ ತಪ್ಪಿಗೆ ಜನರು ಏಕೆ? ಬೀದಿಯಲ್ಲಿ ನಿಲ್ಲಬೇಕು. ವಿಐಪಿಗಳಿಗೆ ಒಂದು ರೀತಿ, ಜನಸಮಾನ್ಯರಿಗೆ ಒಂದು ರೀತಿಯ ನಡೆ ಸರಿಯಲ್ಲ. ಸಂವಿಧಾನದ ಪ್ರಕಾರ ಎಲ್ಲಾ ಮತದಾರರು ಒಂದೇ ಎಂದು ಪ್ರಕಾಶ್ ರಾಜ್ ತಿಳಿಸಿದರು.ಎದ್ದೇಳು ಕರ್ನಾಟಕ, ಜಾಗೃತ ಕರ್ನಾಟಕದ ಮೂಲಕ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಲೋಪದೋಷಗಳನ್ನು ಪಟ್ಟಿ ಮಾಡಿ, ಪಕ್ಷಾತೀತವಾಗಿ ಸಂತ್ರಸ್ತ ಮತದಾರರ ಪರವಾಗಿ ನಿಲ್ಲುವಂತೆ ಸೆಪ್ಟೆಂಬರ್ 30 ರಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಲಾಗುವುದು. ಅಲ್ಲದೆ, ಅಕ್ಟೋಬರ್ 1 ರಂದು ಕರ್ನಾಟಕವಲ್ಲದೆ ಎಸ್.ಐ.ಆರ್.ನಿಂದ ತೊಂದರೆಗೆ ಒಳಗಾಗಿರುವ ಎಲ್ಲಾ ರಾಜ್ಯಗಳ ಮುಖಂಡರು ಸೂಕ್ತ ಸಾಕ್ಷಾಧಾರಗಳೊಂದಿಗೆ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಲಾಗುವುದು. ಅ.3ರಂದು ವಕೀಲರ ತಂಡದ ಮೂಲಕ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾ‌ರ್ ವಿರುದ್ಧ ಎಫ್‌ಐಆ‌ರ್ ದಾಖಲಿಸುವ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದರು.ಅ.15ರಂದು ದೆಹಲಿಯ ಜಂತರ್ ಮಂಥರ್ ನಲ್ಲಿ ವಿರೋಧ ಪಕ್ಷದ ಸಂಸದರು, ರೈತರು ಮತ್ತು ದಲಿತ ಸಂಘಟನೆಗಳು ಸೇರಿದಂತೆ ವಿವಿಧ ಒಕ್ಕೂಟಗಳನ್ನು ಒಳಗೊಂಡ ಬೃಹತ್ ಹೋರಾಟ ನಡೆಸಲಾಗುತ್ತದೆ.

ಸಂತ್ರಸ್ತರು ಹಾಗೂ ಸಾಮಾನ್ಯ ಜನರು ಇನ್ನು ಮುಂದೆ ಯಾವುದೇ ರೀತಿಯ ಭಯ ಪಡುವ ಅಗತ್ಯವಿಲ್ಲ. ಧ್ವನಿ ಇಲ್ಲದವರ ಪರ ನಿಮ್ಮ ಧ್ವನಿಯಾಗಿ ನಾವು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಚಿಂತಕ ದೊರೈರಾಜು, ಸಂಯುಕ್ತ ಹೋರಾಟದ ಸಿ.ಯತಿರಾಜು, ಎದ್ದೇಳು ಕರ್ನಾಟಕದ ಇಂದಿರಾ, ಸಿಐಟಿಯುನ ಸೈಯದ್ ಮುಜೀಬ್‌, ರೈತಸಂಘದ ಗೋವಿಂದರಾಜು, ಮುಹಮದ್ ಯೂಸುಫ್, ವೀರಸಂಗಯ್ಯ ತಾಜುದ್ದೀನ್, ಸಮೀಉಲ್ಲಾ ಮೊದಲಾದವರಿದ್ದರು.

- Advertisement -

Related news

error: Content is protected !!