Wednesday, May 15, 2024
spot_imgspot_img
spot_imgspot_img

SMMAUP ಮುಂಡಿತ್ತಡ್ಕ ಶಾಲೆಯಲ್ಲಿ 24ನೇ ವರ್ಷದ ಕಾರ್ಗಿಲ್ ವಿಜಯ ದಿನಾಚರಣೆ – ನಿವೃತ್ತ ಯೋಧರಿಗೆ ಗೌರವಾರ್ಪಣೆ

- Advertisement -G L Acharya panikkar
- Advertisement -

ಎಸ್.ಎಂ.ಎಂ.ಎ.ಯು.ಪಿ ಮುಂಡಿತ್ತಡ್ಕ ಶಾಲೆಯಲ್ಲಿ 24ನೇ ವರ್ಷದ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಿರಿಯ ಅಧ್ಯಾಪಕ ಪದ್ಮನಾಭ ನಾಯಕ್ ವಹಿಸಿದರು.

ಕುಂಬಳೆ ಉಪ ಜಿಲ್ಲಾ ಶಿಕ್ಷಣ ಅಧಿಕಾರಿ ಶಶಿಧರ್ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಿ ಮಾತನಾಡಿದರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಸೇನೆಯಲ್ಲಿ ಹವಾಲ್ದಾರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಹರೀಶ್ ಶೆಟ್ಟಿ ಹಾಗೂ ಭಾರತೀಯ ಕರ ಸೇನೆಯಲ್ಲಿ ಹವಾಲ್ದಾರ್ ಆಗಿ 18ವರ್ಷಗಳಷ್ಟು ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಉಲ್ಲಾಸ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಶಾಲಾ ಮಕ್ಕಳಿಂದ ಪ್ರಾರ್ಥನೆ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಏಳನೇ ತರಗತಿಯನ ವಿದ್ಯಾರ್ಥಿಗಳು ‘ಮೇರೆ ವತನ್ ಕೆ ಲೋಗೋ’ ಎಂಬ ದೇಶಭಕ್ತಿ ಗೀತೆಯನ್ನು ಹಾಡಿ ವೀರ ಯೋಧರಿಗೆ ನಮನ ಸಲ್ಲಿಸಿದರು. ಶಾಲಾ ವ್ಯವಸ್ಥಾಪಕರಾದ ರಘು ರಾಮ್ ಹಾಗೂ ಶಾಲಾ ಪಿ.ಟಿ.ಎ ಅಧ್ಯಕ್ಷ ಅಬ್ದುಲ್ ಲತೀಫ್ ಉಪಸ್ಥಿತರಿದ್ದರು. ಧೀರ ಯೋಧರು ದಿನದ ಮಹತ್ವ ಹಾಗೂ ಅವರ ಅನುಭವಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು. ಅಧ್ಯಾಪಕರಾದ ಪ್ರಶಾಂತ್ ಸ್ವಾಗತಿಸಿದರು.

- Advertisement -

Related news

error: Content is protected !!