Friday, May 17, 2024
spot_imgspot_img
spot_imgspot_img

27 ಸೆಕೆಂಡುಗಳಲ್ಲಿ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ!

- Advertisement -G L Acharya panikkar
- Advertisement -

ಲಂಡನ್: ಈ ಸುದ್ದಿ ಓದಿದರೆ ನಿಮಗೆ ಅಚ್ಚರಿಯಾಗಬಹುದು. ಯಾಕೆಂದರೆ ಮಹಿಳೆಯೊಬ್ಬರು ಯಾವುದೇ ನೋವು ಇಲ್ಲದೇ, ವಾಟರ್ ಬ್ರೇಕ್ ಆಗದೇ ಕೇವಲ 27 ಸೆಕೆಂಡುಗಳಲ್ಲಿ ತನ್ನ ಮಗುವಿಗೆ ಜನ್ಮ ನೀಡಿದ ಘಟನೆ ಯುಕೆಯಲ್ಲಿ ನಡೆದಿದೆ. ಇದು ಅತ್ಯಂತ ವೇಗದ ಹೆರಿಗೆಯಾಗಿ ದಾಖಲಾಗಿದೆ.

29 ವರ್ಷದ ಸೋಫಿ ಬಗ್, ಯುಕೆಯ ಹ್ಯಾಂಪ್ ಶೈರ್ ನ ಬೇಸಿಂಗ್ ಸ್ಟೋಕ್ ನಲ್ಲಿರುವ ತನ್ನ ಮನೆಯಲ್ಲಿ ರಾತ್ರಿ ಮಲಗಿದ್ದಳು, ವಾಷ್ ರೂಮ್ ಗೆ ಹೋಗಬೇಕಾಗಿ ಬಂದಾಗ ಮಧ್ಯರಾತ್ರಿಯಲ್ಲಿ ಎಚ್ಚರಗೊಂಡಿದ್ದಳು. ಆಕೆ 38 ವಾರಗಳ ಗರ್ಭಿಣಿಯಾಗಿದ್ದಳು.ಆದರೆ ವಾಶ್ ರೂಮ್ ಗೆ ಹೋದ ಒಂದು ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ, ಅವಳ ಕೈಯಲ್ಲಿ ಮಗು ಇತ್ತು. ಅಂದರೆ ಆಕೆ ಕೇವಲ ಕೆಲವೇ ಸೆಕೆಂಡುಗಳಲ್ಲಿ ಮಗುವಿಗೆ ಜನ್ಮ ನೀಡಿದ್ದಳು.

ಅವಳ ಸಂಗಾತಿ 32 ವರ್ಷದ ಕ್ರಿಸ್ ಹೇಳುವಂತೆ, ಸೋಫಿಯ ಬಾತ್ ರೂಮಿನಿಂದ ಹೊರಗೆ ಬಂದಾಗ ಆಕೆಯ ಕಾಲುಗಳ ನಡುವೆ ಮಗುವಿನ ತಲೆಯನ್ನು ನೋಡಿ ಗಾಬರಿಗೊಂಡು ಕೂಡಲೇ ಎಲ್ಲಾ ಕಾರ್ಯಗಳನ್ನು ಮಾಡಿರುವುದಾಗಿ ಹೇಳಿದ್ದಾನೆ..ಕೇವಲ ಒಂದು ಪುಶ್ ನಲ್ಲಿ, ಮಗು ಮಿಲ್ಲಿ ತನ್ನ ತಂದೆಯ ತೋಳುಗಳಲ್ಲಿ ಜನಿಸುತ್ತದೆ.

ಡೈಲಿ ಮೇಲ್ ನಲ್ಲಿ ಸೋಫಿ ಹೇಳಿದ್ದನ್ನು ಉಲ್ಲೇಖಿಸಲಾಗಿದೆ, ‘ಅವಳು ತುಂಬಾ ಫಾಸ್ಟ್ ಆಗಿದ್ದಳು! ಒಂದು ಕ್ಷಣ ನಾನು ಶೌಚಾಲಯದಲ್ಲಿ ನನ್ನ ಸ್ನೇಹಿತನಿಗೆ ಸಂದೇಶ ಕಳುಹಿಸುತ್ತಿದ್ದೆ ಮತ್ತು ಸೆಕೆಂಡುಗಳ ನಂತರ, ನನ್ನ ತೋಳುಗಳಲ್ಲಿ ಮಗು ಜನಿಸಿದೆ . ಕೇವಲ 27 ಸೆಕೆಂಡುಗಳ ಪುಶ್ ನಲ್ಲಿ ಮಗು ಜನಿಸಿದೆ ಎಂದು ಹೇಳಿದ್ದಾರೆ.

ನನಗೆ ಯಾವುದೇ ನೋವು ಇರಲಿಲ್ಲ ಮತ್ತು ವಾಟರ್ ಬ್ರೇಕ್ ಕೂಡ ಆಗಲಿಲ್ಲ. ಅಷ್ಟರಲ್ಲಾಗಲೇ ಮಗು ಜನಿಸಿದ್ದಳು ಎಂದು ತಿಳಿದಿರಲಿಲ್ಲ. ಇದು ನಿಜವಾಗಿಯೂ ಒರಟಾಗಿ ತೋರುತ್ತದೆ ಆದರೆ ನಿಜ ಎಂದು ಅವರು ಹೇಳಿದರು.

‘ವಾಷ್ ರೂಮ್ ಗೆ ಹೋದ ನಾನು ನನ್ನ ಸ್ನೇಹಿತನಿಗೆ ಸಂದೇಶ ಕಳುಹಿಸಿದ್ದೆ, ನಾನು ಆರಾಮವಾಗಿಲ್ಲ ಎಂದು, ನಂತರ ನಾನು ಲೂನಲ್ಲಿ ಕುಳಿತಿದ್ದ ಸ್ಥಳದಿಂದ ಫೋನ್ ಅನ್ನು ಕೆಳಗಿಟ್ಟು ಶೌಚಾಲಯದಿಂದ ಎದ್ದೇಳಲು ಹೋದೆ. ನಾನು ನನ್ನನ್ನು ಮೇಲೆತ್ತಲು ಹೋಗುತ್ತಿದ್ದಂತೆ, ನನ್ನ ದೇಹವು ಪುಶ್ ಮಾಡಿದಂತೆ ಅನಿಸಿತು, ಆದ್ದರಿಂದ ನಾನು ಹಿಂದೆ ಕುಳಿತು, ಪುಶ್ ಮಾಡಿದೆ, ಮತ್ತು ನಾನು ಪುಶ್ ಮಾಡಿದ ಕೂಡಲೇ ಇದು ಮಗು ಜನಿಸುತ್ತಿರುವ ಸೂಚನೆ ಎಂದು ನನಗೆ ತಿಳಿಯಿತು ಎಂದು ಅವರು ಹೇಳುತ್ತಾರೆ.

‘ನಾನು ನನ್ನ ಕಾಲುಗಳ ನಡುವೆ ಕೈ ಹಾಕಿದೆ ಮತ್ತು ಅವಳ ತಲೆ ಸಂಪೂರ್ಣವಾಗಿ ಹೊರಗಿತ್ತು. ನಾನು ಸಹಾಯಕ್ಕಾಗಿ ನನ್ನ ಸಂಗಾತಿಗೆ ಕೂಗಿದೆ, ನನ್ನ ಶೌಚಾಲಯದ ಬಾಗಿಲಿನ ಹೊರಗೆ ಹೋದೆ, ಒಂದು ಪುಶ್ ಮಾಡಿದೆ ಮತ್ತು ಅವಳು ಹೊರಗೆ ಇದ್ದಳು!’

ಹೊಕ್ಕುಳಬಳ್ಳಿಯನ್ನು ಕತ್ತರಿಸಿದ ನಂತರ, ಸೋಫಿ ಮತ್ತು ಮಿಲ್ಲಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಒಂದೆರಡು ಗಂಟೆಗಳ ನಂತರ ಪರಿಪೂರ್ಣ ಆರೋಗ್ಯದಲ್ಲಿ ಬಿಡುಗಡೆ ಮಾಡಲಾಯಿತು.

- Advertisement -

Related news

error: Content is protected !!