Monday, June 30, 2025
spot_imgspot_img
spot_imgspot_img

28 ಸಾವಿರ ಹಣ ಪಡೆದೂ ಕೆಲಸ ಮಾಡಿಕೊಡದ ಸರ್ವೇಯರ್ – ಮತ್ತೆ ಹಣ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ

- Advertisement -
- Advertisement -

ಕಚೇರಿಯಲ್ಲಿ 15 ಸಾವಿರ ರೂ. ಲಂಚ ಸ್ವೀಕರಿಸುವ ವೇಳೆ ಬಾಗಲಕೋಟೆ ,ಬೀಳಗಿಯ ಸರ್ವೇಯರ್ ರೆಡ್‍ಹ್ಯಾಂಡ್ ಆಗಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಸರ್ವೇಯರ್ ಮಹಾಂತೇಶ್ ಕವಳಿಕಟ್ಟಿ, ಅಣ್ಣೇಶಿ ಲಮಾಣಿ ಎಂಬವರಿಂದ 15 ಸಾವಿರ ರೂ. ಹಣ ಪಡೆಯುವಾಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುನಗ ಗ್ರಾಮದಲ್ಲಿದ್ದ 8 ಎಕರೆ ಜಮೀನಿನ ಪಿಟಿ ಶೀಟ್ ಮಾಡಿ ಕೊಡಲು ಆತ ಲಂಚ ಕೇಳಿದ್ದ. ಈ ಹಿಂದೆ 28 ಸಾವಿರ ರೂ. ಪಡೆದು ಕೆಲಸ ಮಾಡಿಕೊಟ್ಟಿರಲಿಲ್ಲ. ಅಲ್ಲದೇ 38 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಎಂದು ತಿಳಿದು ಬಂದಿದೆ.

ಇಂದು 15 ಸಾವಿರ ರೂ. ಹಣವನ್ನು ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆತ ಸಿಕ್ಕಿಬಿದ್ದಿದ್ದಾನೆ. ಮಹಾಂತೇಶ್ ಕವಳಿಕಟ್ಟಿಯನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದು.ಲೋಕಾಯುಕ್ತ ಎಸ್‍ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿವೈಎಸ್‍ಪಿ ಪುಷ್ಪಲತಾ ನೇತೃತ್ವದಲ್ಲಿ ದಾಳಿ ನಡೆದಿದೆ.

- Advertisement -

Related news

error: Content is protected !!