ಮ್ಯಾಂಚೆಸ್ಟರ್:ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಕುಸಿತದಿಂದ ಇಂಗ್ಲೆಂಡ್ ತಂಡವನ್ನು ಡೊಮಿನಿಕ್ ಸಿಬ್ಲೆ ಮತ್ತು ಬೆನ್ ಸ್ಟೋಕ್ಸ್ ಪ್ರವಾಸಿ ವೆಸ್ಟ್ ಇಂಡೀಸ್ ತಂಡಕ್ಕೆ ತಿರುಗೇಟು ನೀಡುವತ್ತ ತಂಡವನ್ನು ಮುನ್ನಡೆಸಿದ್ದಾರೆ. ಬೆನ್ ಸ್ಟೋಕ್ಸ್ 10ನೇ ಶತಕ ಬಾರಿಸಿ , 176 ರನ್ ಬಾರಿಸಿದ ಅವರು ವಿರಾಮದ ಬಳಿಕ ಔಟಾದರು.ಶುಕ್ರವಾರ 3 ವಿಕೆಟ್‌ಗೆ 207 ರನ್‌ಗಳಿಂದ 2ನೇ ದಿನದ ಆಟ ಮುಂದುವರಿಸಿದ ಇಂಗ್ಲೆಂಡ್, 9 ವಿಕೆಟ್‌ಗೆ 469 ರನ್ ಗಳಿಸಿ ಡಿಕ್ಲೇರ್ ಮಾಡಿ ಕೊಂಡಿತು.
ಇಂಗ್ಲೆಂಡ್ 3ಕ್ಕೆ 207 ರನ್ ಮಾಡಿ ದಲ್ಲಿಂದ ದಿನದಾಟ ಮುಂದು ವರಿಸಿತ್ತು. ಆಗ ಸಿಬ್ಲಿ 86, ಸ್ಟೋಕ್ಸ್ 59 ರನ್ ಗಳಿಸಿ ಬ್ಯಾಟಿಂಗ್ ಕಾಯ್ದು ಕೊಂಡಿದ್ದರು.ಕ್ರಮವಾಗಿ 86 ಮತ್ತು 59 ರನ್‌ಗಳಿಂದ ದಿನದಾಟ ಮುಂದುವರಿಸಿದ ಸಿಬ್ಲೆ ಮತ್ತು ಸ್ಟೋಕ್ಸ್ 4ನೇ ವಿಕೆಟ್ ಜತೆಯಾಟವನ್ನು 260 ರನ್‌ಗಳಿಗೆ ವಿಸ್ತರಿಸಿದರು. ವಿಂಡೀಸ್ ಫೀಲ್ಡರ್‌ಗಳಿಂದ ಕೆಲ ಜೀವದಾನಗಳ ನೆರವು ಪಡೆದ ಸ್ಟೋಕ್ಸ್ ಕೊನೆಗೆ ಕೆಮಾರ್ ರೋಚ್ ಎಸೆತದಲ್ಲಿ ಔಟಾದರು.ಪ್ರತಿಯಾಗಿ ವಿಂಡೀಸ್ ದಿನದಂತ್ಯಕ್ಕೆ 1 ವಿಕೆಟ್‌ಗೆ 32 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.
ಇಂಗ್ಲೆಂಡ್: 9 ವಿಕೆಟ್‌ಗೆ 469 ಡಿಕ್ಲೇರ್ –ಸಿಬ್ಲೆ-120, ಸ್ಟೋಕ್ಸ್ -176, ಪೋಪ್ -7, ಬಟ್ಲರ್- 40, ಬೆಸ್-31, ವೆಸ್ಟ್ ಇಂಡೀಸ್: 1 ವಿಕೆಟ್‌ಗೆ 32 –ಬ್ರಾಥ್‌ವೇಟ್- 6, ಕ್ಯಾಂಪ್‌ಬೆಲ್ -12, //ಕರ‌್ರನ್ 8ಕ್ಕೆ- 1.